ಬಾಲಿವುಡ್ ಮಂದಿ ಅತೀ ನಿರೀಕ್ಷೆಯಲ್ಲಿ ಕಾಯುತ್ತಿದ್ದ ವಿವಾಹಗಳಲ್ಲಿ ಒಂದು ಬಿಪಾಶಾ ಹಾಗೂ ಕರಣ್ ಸಿಂಗ್ ಗ್ರೋವರ್ ಅವರ ವಿವಾಹ . ಇವರಿಬ್ಬರ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆಯಿತು. ಇನ್ನು ವಿವಾಹದ ಬಳಿಕ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಬಾಲಿವುಡ್ ಅನೇಕ ನಟ ನಟಿಯರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದ್ರು. ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ , ಐಶ್ವರ್ಯಾ ರೈ,ಶಾರುಖ್ ಖಾನ್ , ರಣ್ ಬೀರ ಕಪೂರ್,ಅಮಿತಾಬ್ ಬಚ್ಚನ್,ಮಾಧವನ್,ಸುಶ್ಮಿತಾ ಸೇನೇ, ಸೋನಮ್ ಕಪೂರ್,ಶಮಿತಾ ಶೆಟ್ಟಿ,ರಾಜ್ ಕುಂದ್ರಾ ಹೀಗೆ ತಾರೆಯರ ದಂಡೇ ನೆರೆದಿತ್ತು.