ಫೆಮಿನಾ ಟೈಮ್ಸ್ ಮ್ಯಾಗಜೀನ್‌ನಲ್ಲಿ ವೆಡ್ಡಿಂಗ್ ಅವತಾರದಲ್ಲಿ ಬಿಪಾಶಾ ಬಸು..

ಶುಕ್ರವಾರ, 1 ಜುಲೈ 2016 (17:48 IST)
ಕೃಷ್ಣ ಸುಂದರಿ ನಟಿ ಬಿಪಾಶಾ ಬಸು ಬಾಯ್‌ಫ್ರೆಂಡ್ ಕರಣ್ ಸಿಂಗ್ ಗ್ರೋವರ್ ಜತೆಗೆ ಮದುವೆಯಾಗಿದ್ದರು. ಮದುವೆ ಆದ ಬಳಿಕ ಬಿಪಾಶಾ ಸದಾ ಒಂದಿಲ್ಲೊಂದು ಸುದ್ದಿ ಮಾಡುತ್ತಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್ ಆಗಿರುವ ಬೆಂಗಾಲಿ ಬೆಡಗಿ ಬಿಪ್ಸ್ ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಆಕರ್ಷಕವಾಗಿ ಹಾಗೂ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.

ಜುಲೈ ತಿಂಗಳ ಫೆಮಿನಾ ಟೈಮ್ಸ್ ವೆಡ್ಡಿಂಗ್ ಮ್ಯಾಗಜೀನ್‌ಗೆ  ಬಿಪಾಶಾ ಬಸು ಮದುಮಗಳ ಅವತಾರದಲ್ಲಿ ಮಿಂಚಿದ್ದಾರೆ. ಈ ಫೊಟೋಶೂಟ್‌ನಲ್ಲಿ ಬಿಪಾಶಾ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ. 
 
ಈ ಬಗ್ಗೆ ಬಿಪಾಶಾ ಬಸು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾಳೆ. ಇನ್ನೂ ನಿನ್ನೆ ಬಿಪಾಶಾ ತಮ್ಮ ಅಪ್ಪನ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದರು. ಬಿಪಾಶಾ ಬಸು ಇಂದಿನ ದಿನಗಳಲ್ಲಿ ಹೆಚ್ಚು ಫ್ಯಾಶನ್ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ನ್ಯೂ ಹೇರ್ ಸ್ಟೈಲ್, ಡೈಮಂಡ್ ರಿಂಗ್ ಆದ್ಮೇಲೆ ಇದೀಗ ಬಿಪಾಶಾ ಬಸು ಪಾದರಕ್ಷೆಗಳನ್ನು ಡಿಸೈನ್ ಮಾಡಿದ್ದರು.. ಅದಾದ ಬಳಿಕ ಬಿಪಾಶಾ, ಇದೀಗ ಫೆಮಿನಾ ಟೈಮ್ಸ್ ಮ್ಯಾಗಜೀನ್‌ನಲ್ಲಿ ಮದುಮಗಳ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. 
 
ಇತ್ತೀಚೆಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದರು.. ಬಿಪಾಶಾ ಬಸು ಬದಲು ಬಿಪಾಶಾ ಬಸು ಗ್ರೋವರ್ ಸಿಂಗ್ ಅಂತ ಸೇರಿಸಿಕೊಂಡಿರುವುದರ ಬಗ್ಗೆ ಶೇರ್ ಮಾಡಿದ್ದರು.
 
ಮೊನ್ನೆ ತಾನೇ  ಸಮ್ಮರ್ ಟ್ರೆಂಡ್‌ನಲ್ಲಿ ಹೊಸ ಹೇರ್‌ಸ್ಟೈಲ್ ಮೂಲಕ ಕಾಣಿಸಿಡಿದ್ದಳು ಬಿಪಾಶಾ.  'ನನಗೆ ಶಾರ್ಟ್ ಹೇರ್ ತುಂಬಾ ಇಷ್ಟ.. ಅದಕ್ಕಾಗಿ ಕಟ್ ಮಾಡಿದ್ದೇನೆ.. ಆದ್ರೂ 'ಐ ಮಿಸ್ ಮೈ ಲಾಂಗ್ ಹೇರ್' ಎಂದು ಬಿಪಾಶಾ ಬರೆದುಕೊಂಡಿದ್ದಳು.
 
ಇನ್ನೂ ಬಿಪಾಶಾ ಕರಣ್ ಹಾಗೂ ಬಿಪಾಶಾ ಏಪ್ರಿಲ್ 30ಕ್ಕೆ  ಮದುವೆಯಾಗಿದ್ದರು. ಬಿಪಾಶಾ ಮನೆಯವರ ಒಪ್ಪಿಗೆಯ ಮೇರೆಗೆ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಮೆಹಂದಿ ಕಾರ್ಯಕ್ರಮ ಏಪ್ರಿಲ್ 28ಕ್ಕೆ ನಡೆದಿತ್ತು. ಬೆಂಗಾಲಿ ಶೈಲಿಯಲ್ಲಿ ಕರಣ್ -ಬಿಪಾಶಾ ಇಬ್ಬರು ಸಪ್ತಪದಿ ತುಳಿದಿದ್ದರು. ಮದುವೆಗೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಆಗಮಿಸಿ ಶುಭಾಷಯ ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ