‘ಹಾಟ್ ಸನ್ನಿ ಲಿಯೋನ್ ಗೆ ದೇವತೆಯ ಪಾತ್ರ ಕೊಡಬೇಡಿ’ ಬಿಜೆಪಿ ನಾಯಕನ ಎಚ್ಚರಿಕೆ!
ಬುಧವಾರ, 6 ಡಿಸೆಂಬರ್ 2017 (09:28 IST)
ನವದೆಹಲಿ: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಳನ್ನು ಹಿಂದೂ ದೇವತೆಯ ಪಾತ್ರ ನೀಡಿ ದೇವತೆಯಂತೆ ಬಿಂಬಿಸಬೇಡಿ ಎಂದು ಹರಿಯಾಣದ ಬಿಜೆಪಿ ನಾಯಕ ಸುರಲ್ ಅಮು ಎಚ್ಚರಿಕೆ ನೀಡಿದ್ದಾರೆ.
ಸನ್ನಿ ಇದೀಗ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದು, ಅದರಲ್ಲಿ ಹಿಂದೂ ದೇವತೆಯ ಪಾತ್ರ ಮಾಡುತ್ತಿದ್ದಾರೆ. ಈ ರೀತಿ ಮಾಡಬೇಡಿ. ವಿದೇಶದಲ್ಲಿದ್ದ ಸನ್ನಿ ಹಿಂದೂ ದೇವತೆಯ ಪಾತ್ರ ಮಾಡುವುದು ದೇವತೆಗಳಿಗೆ ಅವಮಾನ ಮಾಡಿದಂತೆ. ಹಾಗೆ ಮಾಡಿದರೆ ಸುಮ್ಮನಿರಲ್ಲ ಎಂದು ಬಿಜೆಪಿ ನಾಯಕ ಎಚ್ಚರಿಕೆ ನೀಡಿದ್ದಾರೆ.
ಹಿಂದೆ ಪದ್ಮಾವತಿ ಸಿನಿಮಾ ವಿವಾದವಾದಾಗಲೂ ಸುರಲ್ ಅಮು ದೀಪಿಕಾ ಪಡುಕೋಣೆ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಸನ್ನಿ ಮೇಲೆ ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ