ಮುಂಬೈ: ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ‘ಭಜರಂಗಿ ಬಾಯ್ ಜಾನ್’ ಚಿತ್ರದಲ್ಲಿ ಕರೀನಾ ಕಪೂರ್ ಅಮ್ಮನ ಪಾತ್ರದಲ್ಲಿ ನಟಿಸಿದ್ದ ಆಲ್ಕಾ ಕೌಶಲ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಭಜರಂಗಿ ಸಿನಿಮಾವಲ್ಲದೆ, ಸೂಪರ್ ಹಿಟ್ ಚಿತ್ರ ಕ್ವೀನ್ ನಲ್ಲೂ ನಾಯಕಿಯ ಅಮ್ಮನ ಪಾತ್ರ ನಿರ್ವಹಿಸಿದ್ದ ಕೌಶಲ್, ಕೆಲವು ಟಿವಿ ಧಾರವಾಹಿಗಳೂ ನಟಿಸಿ ಹೆಸರು ಮಾಡಿದ್ದರು. ಇದೀಗ ಕಾಳಧನ ಮತ್ತು 50 ಲಕ್ಷ ರೂ.ಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.
ಆಕೆಯ ಕಾಳಧನ ವ್ಯವಹಾರಕ್ಕೆ ಕೈ ಜೋಡಿಸಿದ ತಾಯಿ ರಂಗಭೂಮಿ ಕಲಾವಿದೆ ವಿಶ್ವ ಮೋಹನ್ ಬಡೋಲಾಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಧಾರವಾಹಿ ನಿರ್ಮಿಸುವುದಾಗಿ ಆಲ್ಕಾ ದೂರುದಾರರ ಬಳಿಯಿಂದ 50 ಲಕ್ಷ ರೂ. ಪಡೆದಿದ್ದರಂತೆ. ಆದರೆ ದೂರುದಾರರು ಹಣ ವಾಪಸ್ ಕೇಳಿದಾಗ 25 ಲಕ್ಷ ರೂ.ಗಳ ಎರಡು ಚೆಕ್ ನೀಡಿದ್ದರು. ಆದರೆ ಇದನ್ನು ಬ್ಯಾಂಕ್ ಗೆ ಹಾಕಿದಾಗ ಬೌನ್ಸ್ ಆಗಿತ್ತು. ಈ ಹಿನ್ನಲೆಯಲ್ಲಿ ಅವರ ಮೇಲೆ ದೂರು ದಾಖಲಾಗಿತ್ತು.