ಅಂತಾರಾಷ್ಟ್ರೀಯ ಮಟ್ಟದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಬಾಲಿವುಡ್ ಕೊರಿಯೊಗ್ರಾಫರ್ ಅರೆಸ್ಟ್
ಶನಿವಾರ, 17 ನವೆಂಬರ್ 2018 (07:41 IST)
ಮುಂಬೈ : ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ವ್ಯವಸ್ಥಿತ ವೇಶ್ಯಾವಾಟಿಕೆ ಜಾಲದಲ್ಲಿ ಹಿಂದಿ ಚಿತ್ರರಂಗದ ನೃತ್ಯ ನಿರ್ದೇಶಕಿಯೊಬ್ಬಳನ್ನು ಮುಂಬೈನ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಬಾಲಿವುಡ್ ಕೊರಿಯೊಗ್ರಾಫರ್ ಅಗ್ನೆಸ್ ಹ್ಯಾಮಿಲ್ಟನ್(56) ಬಂಧಿತ ಆರೋಪಿಯಾಗಿದ್ದು, ಹ್ಯಾಮಿಲ್ಟನ್ ಸ್ಟಾರ್ ಎಂಟರ್‍ಪೈಸಸ್ ಹೆಸರಿನಲ್ಲಿ ಡ್ಯಾನ್ಸ್ ಕ್ಲಾಸ್‍ಗಳನ್ನು ನಡೆಸುತ್ತಿದ್ದ ಈಕೆ ಹಲವಾರು ಹಾಲಿವುಡ್ ನಟರು ಮತ್ತು ರಾಜಕಾರಣಿಗಳೊಂದಿಗೆ ತಾನು ಇರುವ ಫೋಟೊಗಳನ್ನು ಫೇಸ್ ಬುಕ್‍ನಲ್ಲಿ ಹಾಕಿ ಯುವತಿಯರನ್ನು ತನ್ನ ನೃತ್ಯ ತರಗತಿಗಳಿಗೆ ಆಕರ್ಷಿಸುತ್ತಿದ್ದಳು.
ನಂತರ ನೃತ್ಯ ಕಾರ್ಯಕ್ರಮಗಳ ನೆಪದಲ್ಲಿ ಮುಂಬೈ ಸೇರಿದಂತೆ ವಿವಿಧ ನಗರಗಳಿಂದ ಯುವತಿಯರನ್ನು ರವಾನಿಸಿ ಅಲ್ಲಿ ಬಲವಂತದಿಂದ ವೇಶ್ಯಾವಾಟಿಕೆಗೆ ದೂಡುತ್ತಿದ್ದಳು ಎಂಬುದಾಗಿ ಆರೋಪಿಸಲಾಗಿದೆ. ಭಾರತ ಮತ್ತು ಮಲೇಷ್ಯಾ ಪೌರತ್ವ ಪಡೆದಿರುವ ಈಕೆ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಳು.
ಕೀನ್ಯಾಗೆ ಕಳ್ಳಸಾಗಣೆಯಾಗಿದ್ದ ಯುವತಿಯೊಬ್ಬಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದ ನಂತರ ಈ ಜಾಗತಿಕ ದಂಧೆ ಬಯಲಾಗಿದ್ದು ಇದೀಗ ಈ ದಂದೆಯಲ್ಲಿ ತೊಡಗಿದ್ದ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲವು ಬಾಲಿವುಡ್ ತಾರೆಯರಿಗೆ ನೃತ್ಯಗಳನ್ನು ಹೇಳಿಕೊಟ್ಟಿರುವ ಈಕೆ ಕೆಲವು ಸಿನಿಮಾಗಳ ನೃತ್ಯ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾಳೆ .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.