ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ - ರಣವೀರ್ ಸಿಂಗ್

ಶುಕ್ರವಾರ, 16 ನವೆಂಬರ್ 2018 (09:17 IST)
ಮುಂಬೈ : ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರ  ವಿವಾಹ ಮಹೋತ್ಸವವು ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.


ನಟಿ  ದೀಪಿಕಾ ಪಡುಕೋಣೆ ಮತ್ತು ನಟ  ರಣ್‍ವೀರ್ ಸಿಂಗ್ ಬುಧವಾರ ಸಿಂಧ್ ಸಮುದಾಯದಂತೆ ಸಪ್ತಪದಿ ತುಳಿದಿದ್ದು, ಗುರುವಾರ ಇಟಲಿಯ ಸುಂದರ ಪ್ರವಾಸಿ ತಾಣ ಲೇಕ್ ಕೊಮೊವಿನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊದಲ್ಲಿ ಕೊಂಕಣಿ ಸಂಪ್ರದಾಯದಂತೆ ಮತ್ತೊಮ್ಮೆ ಈ ಜೋಡಿ ಮದುವೆಯಾಗಿದ್ದಾರೆ.


ಇವರಿಬ್ಬರ ವಿವಾಹ ಸಂಭ್ರಮಕ್ಕೆ ಬಾಲಿವುಡ್ ದಿಗ್ಗಜರಾದ ಶಾರೂಕ್ ಖಾನ್, ಫರಹಾ ಖಾನ್, ಸಂಜಯ್ ಲೀಲಾ ಬನ್ಸಾಲಿ ಸಾಕ್ಷಿಯಾದರು. ನವೆಂಬರ್ 21ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆಯವರ ಬಂಧುಗಳು ಮತ್ತು ಆಪ್ತ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ನವೆಂಬರ್ 21ರಂದು ಮುಂಬೈಯಲ್ಲಿ ಇನ್ನೊಂದು ರಿಸೆಪ್ಷನ್ ಪಾರ್ಟಿ ನಡೆಯಲಿದ್ದು, ಅದರಲ್ಲಿ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ