ಎಲ್ಲರ ಗಮನ ಸೆಳೆಯುತ್ತಿರುವ ಪಿಗ್ಗಿಚಾಪ್ಸ್ ಹಾಡುಗಳು... !

ಶುಕ್ರವಾರ, 25 ಏಪ್ರಿಲ್ 2014 (09:41 IST)
ಪ್ರಿಯಾಂಕ ಚೋಪ್ರ  ವಿಶ್ವ ಸುಂದರಿ, ಮಾಡೆಲ್ ಮತ್ತು ನಟಿಯಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಆಕೆ ಒಬ್ಬ ಹಾಡುಗಾರ್ತಿಯಾಗಿಯು ಸಹಿತ ಎಲ್ಲರ ಗಮನ ಸೆಳೆದಿದ್ದಾಳೆ. ಈ ಹಿಂದಿ ನಟಿ ಬಾಲಿವುಡ್ ಚಿತ್ರದಲ್ಲಿ ಹಾಡಿರ ಬಹುದೇನೋ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ತಪ್ಪುಗ್ರಹಿಕೆ, ಪಿಗ್ಗಿ ಇಂಗ್ಲೀಷ್ ಭಾಷೆಯಲ್ಲಿ ಹಾದಿ ತನ್ನ ಪ್ರತಿಭೆ ತೋರಿದ್ದಾಳೆ. 
 
ಈಕೆ ಹಾಡಿನ ರೀತಿಗೆ  ಇಡಿ ಪಾಪ್ ಪ್ರಿಯರು ದಂಗಾಗಿ ಹೋಗಿದ್ದಾರಂತೆ. ಈ ಆನ್   ಸ್ಕ್ರೀನ್ ಬ್ಯೂಟಿ  ಪಿಗ್ಗಿ ಚಾಪ್ಸ್  ಬಿ ಟೌನ್ ಬೆಬ್ಸ್ ಗಳಿಗೆ ತಾನು ನಿಮ್ಮೆಲ್ಲರಿಗಿಂತ ಭಿನ್ನ ಎಂಬುದಾಗಿ ತೋರಿದ್ದಾಳೆ. ಆಕೆ  ಹಾಡುವುದನ್ನು ಸಹ ಪ್ರೊಫೆಶನಲ್ ಆಗಿ ತೆಗೆದುಕೊಂಡಿದ್ದಾಳೆ. 
 
ಐ ಕಾಂಟ್ ಮೆಕ್ ಯು ಲವ್ ಮಿ ಅನ್ನುವ  ಜಿಂಗಲ್ ಆಕೆ ಬಿಡುಗಡೆ ಮಾಡಿದ್ದಾಳೆ. ಇನ್ನು ವೀಡಿಯೋ ಬಿಡುಗಡೆ ಆಗಿರದ ಈ ಹಾಡು ಅಮೇರಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದೆ. ತನ್ನ ಮಾದಕ ರೂಪದ ಮುಖಾಂತರ ಮನ ಸೆಳೆದಿದ್ದ ಪ್ರಿಯಾಂಕ  ಈಗ ತನ್ನ ಮಾದಕ ಕಂಠ ದಿಂದಲೂ ಸಹ  ವಿಶ್ವದ ಗಮನ ಸೆಳೆದಿದ್ದಾಳೆ..  ಈ ಆಲ್ಬಮ್ ನಲ್ಲಿ  ಆಕೆಯೊಂದಿಗೆ ಪ್ರಸಿದ್ಧ ಹಾಡುಗಾರ  ಪಿಟ್ ಬಲ ಸಹ ಇದ್ದಾರೆ .  ವಾರ್ರೆವ್ವಾ  ಪ್ರಿಯಾಂಕ !

ವೆಬ್ದುನಿಯಾವನ್ನು ಓದಿ