ಬಾಲಿವುಡ್ ತಾರೆಯರ ವಿಚ್ಛೇದನಕ್ಕೆ ಕೋಟಿ ಕೋಟಿ ಜೀವನಾಂಶ.. ಹೃತಿಕ್ ಕೊಟ್ಟದ್ದು ಎಷ್ಟು ಗೊತ್ತಾ..?
ಮಂಗಳವಾರ, 23 ಮೇ 2017 (13:38 IST)
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರ ವಿಚ್ಛೇದನಾ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಹೆಚ್ಚು ಗಮನ ಸೆಳೆಯುತ್ತಿರುವುದು ವಿಚ್ಛೇದನಾ ಸಂಬಂಧ ಪಡೆಯುವ ಜೀವನಾಂಶ. ತಮ್ಮ ಮಾಜಿ ಪತ್ನಿಯರಿಗೆ ನಟ ಮತ್ತು ಉದ್ಯಮಿಗಳು ಭಾರೀ ಪ್ರಮಾಣದ ಜೀವನಾಂಶ ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲ ಉದಾಹರಣೆಗಳು ಇಲ್ಲಿವೆ.
ಮಲೈಕಾಗೆ 15 ಕೋಟಿ ರೂ. ಕೊಟ್ಟ ಅರ್ಬಾಸ್: ಇತ್ತೀಚೆಗೆ ವಿಚ್ಛೇದನಾ ಪಡೆದ ಬಾಲಿವುಡ್ ತಾರಾ ಜೋಡಿ ಅರ್ಬಾಸ್ ಮತ್ತು ಮಲೈಕಾ ಅರೋರಾ. 1998ರಲ್ಲಿ ವಿವಾಹವಾಗಿದ್ದ ಈ ಜೋಡಿ 18 ವರ್ಷಗಳ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ವಿಚ್ಛೇದನಾ ಸಂದರ್ಭ ಅರ್ಬಾಸ್ 15 ಕೋಟಿ ರೂ. ಹಣ ಮತ್ತು 1 ಐಶಾರಾಮಿ ಫ್ಲ್ಯಾಟ್ ಕೊಟ್ಟಿದ್ದಾರೆ.
ಕರಿಷ್ಮಾಗೆ 14 ಕೋಟಿ ಕೊಟ್ಟ ಸಂಜಯ್: 2014ರಲ್ಲಿ ಪತಿ ಸಂಜಯ್ ಕಪೂರ್`ರಿಂದ ವಿಚ್ಛೇದನಾ ಪಡೆದ ಕರೀಷ್ಮಾ 14 ಕೋಟಿ ರೂ/ಜೀವನಾಂಶ ಪಡೆದಿದ್ದಾರೆ. 2003ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತ್ತು.
380 ಕೋಟಿ ಕೊಟ್ಟ ಹೃತಿಕ್: 2000ರಲ್ಲಿ ಸುಸೈನ್ ಖಾನ್ ಕೈಹಿಡಿದಿದ್ದ ಹೃತಿಕ್ 2014ರಲ್ಲಿ ವಿಚ್ಛೇದನಾ ನೀಡಿದ್ದರು. ಈ ಸಂದರ್ಭ ಹೃತಿಕೆ 380 ಕೋಟಿ ರೂ. ಜೀವನಾಂಶ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಬಾಲಿವುಡ್`ನಲ್ಲೇ ಅತಿಹೆಚ್ಚು ಜೀವನಾಂಶ ನೀಡಿದ ನಟ ಹೃತಿಕ್.
25 ಕೋಟಿ ರೂ. ಕೊಟ್ಟ ಪ್ರಭುದೇವ: ತಮಿಳು ನಟ ಪ್ರಭುದೇವ ತನ್ನ ಮೊದಲ ಪತ್ನಿ ರಾಮ್ ಲತಾಗೆ 2011ರಲ್ಲಿ ವಿಚ್ಛೇದನಾ ನೀಡಿದ್ದರು. ಪತ್ನಿಗೆ ಜೀವನಾಂಶವಾಗಿ 25 ಕೋಟಿ ರೂ. ಹಣ ಮತ್ತು ಐಶಾರಾಮಿ ಕಾರು ನೀಡಿದ್ದರು.
50 ಕೋಟಿ ಕೊಟ್ಟ ಆದಿತ್ಯಾ ಚೋಪ್ರಾ: 2001ರಲ್ಲಿ ಪಾಯಲ್ ಖನ್ನಾರನ್ನ ವರಿಸಿದ್ದ ಆದಿತ್ಯಾ ಚೋಪ್ರಾ 2005ರಲ್ಲಿ ವಿಚ್ಛೇದನಾ ನೀಡಿದ್ದರು. ಈ ಸಂದರ್ಭ 50 ಕೋಟಿ ಜೀವನಾಂಶ ನೀಡಿದ್ದಾರೆ. 2014ರಲ್ಲಿ ಆದಿತ್ಯಾ ಚೋಪ್ರಾ, ರಾಣಿ ಮುಖರ್ಜಿ ಕೈಹಿಡಿದಿದ್ದರು.
ಇನ್ನೂ, ಸೈಫ್ ಅಲಿಖಾನ್ ಮೊದಲ ಪತ್ನಿ ಅಮೃತಾ ಸಿಂಗ್ ವಿಚ್ಛೇದನಾ ಕೊಟ್ಟಾಗ 5 ಕೋಟಿ ರೂ. ಜೀವನಾಂಶ ನೀಡಿದ್ದಾರೆ. ಸಂಜಯ್ ದತ್, ರಿಯಾ ಪಿಳ್ಳೈಗೆ 8 ಕೋಟಿ ರೂ. ಜೀವನಾಂಶ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ