ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

Krishnaveni K

ಬುಧವಾರ, 13 ಆಗಸ್ಟ್ 2025 (10:06 IST)
Photo Credit: X
ಬೆಂಗಳೂರು: ಕರ್ನಾಟಕದಲ್ಲಿ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾದಾಗಲೆಲ್ಲಾ ಈ ಸಮಸ್ಯೆ ಬಂದೇ ಬರುತ್ತಿದೆ. ಇದೀಗ ಕೂಲಿ ಸಿನಿಮಾ ಟಿಕೆಟ್ ದರವೂ ಗಗನಕ್ಕೇರಿದೆ. ಆದರೆ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂಬ ಪರಿಸ್ಥಿತಿಯಾಗಿದೆ.

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ನಾಳೆ ವಿಶ್ವದಾದ್ಯಂತ ಬಿಡುಗಡೆಎಯಾಗುತ್ತಿದೆ. ಕನ್ನಡ ನಟ ಉಪೇಂದ್ರ ಸೇರಿದಂತೆ ಘಟಾನುಘಟಿ ಸ್ಟಾರ್ ಗಳು ಸಿನಿಮಾದಲ್ಲಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.

ಅದರಲ್ಲೂ ರಜನಿ ಸಿನಿಮಾವೆಂದರೆ ಕೇಳಬೇಕೇ? ಹುಚ್ಚು ಅಭಿಮಾನಿಗಳು ಮೊದಲ ದಿನವೇ ಸಿನಿಮಾ ನೋಡಲು ಕಾಯುತ್ತಿರುತ್ತಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಸಿನಿಮಾ ಟಿಕೆಟ್ ದರ ಆರಂಭಿಕ ಬೆಲೆಯೇ 400 ರೂ. ಇದೆ! ಬೇರೆ ಯಾವ ರಾಜ್ಯದಲ್ಲೂ ಇಲ್ಲದಷ್ಟು ದುಬಾರಿ ನಮ್ಮ ರಾಜ್ಯದಲ್ಲಿದೆ. ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಟಿಕೆಟ್ ದರಕ್ಕೆ ಯಾವುದೇ ನಿಯಂತ್ರಣವಿಲ್ಲ. ಸರ್ಕಾರ ಅಧಿಕೃತವಾಗಿ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರುವವರೆಗೂ ಈ ಸಮಸ್ಯೆ ಇದ್ದೇ ಇರುತ್ತದೆ. ಸದ್ಯಕ್ಕೆ ಕೂಲಿ ಟಿಕೆಟ್ ದರ 400-2000 ರೂ.ವರೆಗಿದೆ. ಈ ಟಿಕೆಟ್ ದರ ಇಟ್ಟುಕೊಂಡು ಮಧ್ಯಮ ವರ್ಗದವರು ಯಾರೂ ಸಿನಿಮಾ ನೋಡಕ್ಕೂ ಆಗಲ್ಲ. ಒಟಿಟಿಯಲ್ಲಿ ಇದೇ ದರಕ್ಕೆ ಚಂದಾದಾರರಾದರೆ ಹಲವು ಸಿನಿಮಾ ಮಾಡಬಹುದು. ಕೂಲಿ ಸಿನಿಮಾವೂ ಒಟಿಟಿಗೆ ಬರುತ್ತದೆ. ಆಗ ನೋಡಿಕೊಳ್ಳೋಣ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ