ಬಾಲಿವುಡ್ ನಲ್ಲೀಗ ಮಹಿಳೆಯರ ಪರ್ವ- ಸೋನಾಕ್ಷಿ ಸಿನ್ಹಾ

ಶನಿವಾರ, 6 ಆಗಸ್ಟ್ 2016 (09:20 IST)
ಒಂದು ಕಾಲದಲ್ಲಿ ಬಾಲಿವುಡ್ ಅಂದ್ರೆ ತಕ್ಷಣ ನೆನಪಾಗುತ್ತಿದ್ದದ್ದು ಕೇವಲ ಹೀರೋಗಳ ಹೆಸರುಗಳು ಮಾತ್ರ. ಹೀರೋಯಿನ್ ಗಳನ್ನು ಅಷ್ಟೊಂದು ಮಟ್ಟದಲ್ಲಿ ಗುರುತಿಸುತ್ತಿರಲಿಲ್ಲ.ಆದ್ರೀಗ ಕಾಲ ಬದಲಾಗಿದೆ. ಹೀರೋಯಿನ್ ಗಳಿಗೆ ಬಾಲಿವುಡ್ ನಲ್ಲಿ  ಸಾಕಷ್ಟು ಹೆಸರು ಸಿಗುತ್ತಿದೆ.ಅವರು ಕೂಡ ನಾಯಕ ಪ್ರಧಾನ ಸಿನಿಮಾದಂತೆ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.ಹೀಗಂಥ ಹೇಳಿರೋದು ಬೇರಾರು ಅಲ್ಲ ನಟಿ ಸೋನಾಕ್ಷ ಸಿನ್ಹಾ.

ಸದ್ಯ ಬಾಲಿವುಡ್ ನಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಸೋನಾಕ್ಷಿ ಸಿನ್ಹಾ ಅವರು ಫುಲ್ ಖುಷಿಯಾಗಿದ್ದಾರಂತೆ. ಬಾಲಿವುಡ್ ನಲ್ಲಿ ಈಗ ಉತ್ತಮ ಸಿನಿಮಾಗಳು ಬರುತ್ತಿವೆ.ಅದರಲ್ಲೂ ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಇದು ಉತ್ತಮ ಬೆಳವಣಿಗೆ ಅಂದಿದ್ದಾರೆ. ಸದ್ಯ ಅಕಿರ ಅನ್ನೋ ಆಕ್ಷನ್ ಸಿನಿಮಾದಲ್ಲಿ ಸೋನಾಕ್ಷಿ ಅಭಿನಯಿಸುತ್ತಿದ್ದಾರೆ.

ಅಲ್ಲದೇ ಮಹಿಳ ಪ್ರದಾನ ಸಿನಿಮಾಗಳತ್ತ ಇವತ್ತಿನ ಪ್ರೇಕ್ಷಕರು ಕೂಡ ಹೆಚ್ಚಿನ ಒಳವನ್ನು ತೋರುತ್ತಿದ್ದಾರೆ.ಅವರಿಗೆ ಯಾವ ರೀತಿಯ ಸಿನಿಮಾಗಳನ್ನು ನೋಡಬೇಕು ಅನ್ನೋ ಅರಿವಿದೆ. ಅದರಲ್ಲೂ ಬಾಲಿವುಡ್ ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಒಳ್ಳೊಳ್ಳೆಯ ಕಥಾ ಹಂದರವನ್ನು ಇಟ್ಟುಕೊಂಡು ಬರುತ್ತಿವೆ ಅಂತಾ ಅವರು ಹೇಳಿದ್ದಾರೆ.

ಇನ್ನು ಅಕಿರ ಸಿನಿಮಾದ ಬಗ್ಗೆ ಮಾತನಾಡಿರುವ ಸೋನಾಕ್ಷಿ ಅಕಿರ ನನ್ನ ವೃತ್ತಿ ಬದುಕಿನ ವಿಭಿನ್ನ ಸಿನಿಮಾ. ಆಕ್ಷನ್ ಸಿನಿಮಾದಲ್ಲಿ ನಾನು ಇದುವೆರೆಗೂ ಅಭಿನಯಿಸಿರಲಿಲ್ಲ.ಆದ್ರೀಗ ಅಂತಹ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಅಕಿರ ಜೋಧಪುರ್ ದಿಂದ ಮುಂಬೈಗೆ ಬರುಮ ಹೆಣ್ಣು ಮಗಳೊಬ್ಬಳ ಕಥೆಯಾಧಾರಿತ ಸಿನಿಮಾ ಅಂತಾ ಸೋನಾಕ್ಷಿ ಹೇಳಿದ್ದಾರೆ. ಎ.ಆರ್ . ಮುರುಗದಾಸ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ