ಸನ್ನಡತೆ ಆಧಾರದ ಮೇಲೆ ಸಂಜಯ್ ದತ್ ಬಿಡುಗಡೆ: ವಿವರಣೆ ಕೇಳಿದ ಬಾಂಬೆ ಹೈಕೋರ್ಟ್

ಮಂಗಳವಾರ, 13 ಜೂನ್ 2017 (07:46 IST)
ಶಿಕ್ಷೆ ಅವಧಿ ಮುಗಿಯುವುದಕ್ಕೂ ಮುನ್ನವೇ ಬಾಲಿವುಡ್ ನಟ ಸಂಜಯ್ ದತ್ ಅವರನ್ನ ಜೈಲಿನಿಂದ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದ್ದನ್ನ ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ಸನ್ನಡತೆ ನಿಯಮಾವಳಿಗಳ ಬಗ್ಗೆ ವಿವರಣೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

5 ವರ್ಷ ಶಿಕ್ಷೆಗೊಳಗಾಗಿದ್ದ ಸಂಜಯ್ ದತ್ ಅವರನ್ನ 42 ತಿಂಗಳಿಗೇ ಸನ್ನಡತೆ ಆಧಾರದ ಮೇಲೆ ರಿಲೀಸ್ ಮಾಡಲಾಗಿತ್ತು. ಕಳೆದ ಫೆಬ್ರವರಿ ದತ್ ಜೈಲಿನಿಂದ ಹೊರಬಂದಿದ್ದರು.

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮವಾಗಿ ಎಕೆ 57 ಗನ್ ಹೊಂದಿದ್ದ ಸಂಜಯ್ ದತ್ ಮೇಲಿನ ಆರೋಪ ಸಾಬೀತಾಗಿತ್ತು. ವಿಚಾರಣಾ ಅವಧಿಯಲ್ಲಿ 18 ತಿಂಗಳು ಜೈಲಿನಲ್ಲಿದ್ದ ಸಂಜಯ್ ದತ್`ಗೆ 2013ರಲ್ಲಿ ತೀರ್ಪು ಹೊರಬಿದ್ದಾಗ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಅದಾಗಲೇ ದತ್ 18 ತಿಂಗಳು ಜೈಲಿನಲ್ಲಿದ್ದುದರಿಂದ 42 ತಿಂಗಳ ಜೈಲು ವಾಸ ಅನುಭವಿಸಬೇಕಿತ್ತು.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ