ಶ್ರುತಿ ಹಾಸನ್ ವಿರುದ್ಧ ಕೋರ್ಟ್ ಮೆಟ್ಟಿಲೆರಿದ ಪಿವಿಪಿ ಸಿಸಿಮಾ ಸಂಸ್ಥೆ

ಸೋಮವಾರ, 20 ಏಪ್ರಿಲ್ 2015 (11:49 IST)
ನಟಿ ಶ್ರುತಿ ಹಾಸನ್ ಇತ್ತೀಚೆಗೆ ತಮ್ಮ ಜೊತೆ ನ್ಯಾಯಬದ್ಧ ವ್ಯವಹಾರ ಮಾಡಿಲ್ಲ ಎಂದು ಪಿವಿಪಿ ಪಿಕ್ಚರ್ಸ್‌ನವರು  ಕೋಪಗೊಂಡಿದ್ದಾರೆ. ಅದರ ಪರಿಣಾಮ ಅವರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಗ್ರಿಮೆಂಟ್ ಮಾಡಿ ಡೇಟ್ಸ್ ನೀಡುತ್ತಿಲ್ಲ ಎನ್ನುವ ಸಿಟ್ಟು ಈ ಸಿನಿಮಾ ಸಂಸ್ಥೆಯವರದ್ದಾಗಿದೆ. ಬೇರೆ ಸಿನಿಮಾಗಳಲ್ಲೂ ಸಹಿತ ಈಕೆ ನಟಿಸಬಾರದು ಎನ್ನುವಂತಹ ಆರ್ಡರ್ ನೀಡಬೇಕು ಎಂದು ಆ ಸಿನಿ ಕಂಪನಿಯರು ನ್ಯಾಯಾಲಯದ ಬಳಿ ಕೋರಿದ್ದಾರೆ. ಇವೆಲ್ಲ ಶ್ರುತಿಯ ಬೇಜಾಬ್ದಾರಿತನದ ಕಾರಣದಿಂದ ಆಗಿದೆ ಎಂದು ಹೇಳಿದ್ದಾರೆ. 

ಆದರೆ ಈಗ ಶ್ರುತಿ ವಿಷಯಕ್ಕೆ ಬರುವುದಾದರೆ ಆಕೆಯ ವರ್ಶನ್ ಬೇರೆಯಾಗಿದೆ. ಪಿಕ್ಚರ್ ಹೌಸ್ ಮೀಡಿಯ ಸಂಸ್ಥೆ ಮಾಡಿರುವ ಆರೋಪದ ಬಗ್ಗೆ ಆಕೆ ಸ್ಪಷ್ಟವಾದ ವಿವರಣೆ ನೀಡಿದ್ದಾಳೆ. ಸಿಟಿ ಸಿವಿಲ್ ಕೋರ್ಟ್  ನ್ಯಾಯಾಧೀಶರಾದ ಬಿ ಚಂದ್ರಸೇನ್ ರೆಡ್ಡಿ ಅವರು ವಾದಗಳನ್ನು ಆಲಿಸಿದರು. ಶ್ರುತಿ ಹಾಸನ್ ಅವರಿಗೆ ತೊಂದರೆ ಕೊಡುವುದೇ ಆ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾಳೆ. 
 
ತನಗೆ ಆಫರ್ ನೀಡಿದ ಸಿನಿಮಾದಲ್ಲಿ ತಮನ್ನಾಗೆ ಅವಕಾಶ ನೀಡಿ ಎಪ್ರಿಲ್ 2 ರಿಂದ ಶೂಟಿಂಗ್ ಮಾಡಿಸುವುದಾಗಿ ಹೇಳಿದ್ದಾರೆ ಈ ಚಿತ್ರತಂಡ ತನ್ನನ್ನು ಉದ್ದೇಶಪೂರ್ವಕವಾಗಿ ತೊಂದರೆಗೆ ಈಡು ಮಾಡುತ್ತಿದೆ ಎಂದು ಶ್ರುತಿ ಹೇಳಿದ್ದಾಳೆ. 
 
ಈ ಬಗ್ಗೆ ತಮ್ಮ ವಾದ ಮುಂದಿಟ್ಟ ಶ್ರುತಿ ವಕೀಲ ಯಾರೇ ಆಗಲಿ ಶ್ರುತಿಯ ನಟನೆ ಬಯಸಿದರೆ ಮೊದಲು ಆಕೆಗೆ ಹತ್ತು ಲಕ್ಷ ರೂಗಳಷ್ಟು ಮುಂಗಡ ನೀಡ ಬೇಕು, ಅದಲ್ಲದೆ ಒಂದು ತಿಂಗಳ ಮುನ್ನ ಕಾಲ್ಶೀಟ್ ತೆಗೆದುಕೊಳ್ಳ ಬೇಕು, ಆದರೆ ಅಂತಹ ಯಾವುದೇ ಕೆಲಸ ಮಾಡಿಲ್ಲ ಆ ಸಂಸ್ಥೆಯವರು. ಬದಲಿಗೆ ಕೆಲವು ದಿನಗಳ ಮುಂದೆಯಷ್ಟೆ ಸಮಾಚಾರ ನೀಡಿದ್ದಾರೆ ಎಂದು ಹೇಳಿದ್ದಾರೆ. ಆದರೇ ಈ ಗಲಾಟೆಯು ಯಾವ ರೀತಿಯ ಅಂತಿಮ ಫಲಿತಾಂಶ ಪಡೆದುಕೊಳ್ಳುತ್ತದೆ ಎನ್ನುವುದರ ಬಗ್ಗೆ ಎಲ್ಲರಿಗೂ ಕಾತುರವಿದೆ. 

ವೆಬ್ದುನಿಯಾವನ್ನು ಓದಿ