ಸಿಸಿಟಿವಿಯಲ್ಲಿ ಸೆರೆಯಾಯ್ತು.. ಬಟ್ಟೆ ಶೋ ರೂಂನಲ್ಲಿ ನಟ ರಿತೇಶ್ ದೇಶಮುಖ್ ಕಳ್ಳತನ! ವಿಡಿಯೋ

ಬುಧವಾರ, 25 ಮೇ 2016 (15:17 IST)
ಬಾಲಿವುಡ್‌ನ ನಟ ರಿತೇಶ್ ದೇಶಮುಖ್ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರಾ? ಹೀಗೊಂದು ಅನುಮಾನ ಮೂಡಿದೆ... ಬಟ್ಟೆ ಅಂಗಡಿಗೆ ಭೇಟಿ ನೀಡಿದ ರಿತೇಶ್ ದೇಶಮುಖ ಅಲ್ಲಿ ಕೆಲ ಟೀ ಶರ್ಟ್..ಪ್ಯಾಂಟ್‌ ಗ‌ಳನ್ನು ತೆಗೆದುಕೊಂಡು ಶೋ ರೂಂನಿಂದ ಹೊರಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ವೈರಲ್ ಆಗಿದೆ.
 
 
ಮುಂಬರುವ ಚಿತ್ರದ ಪಬ್ಲಿಸಿಟಿಗೋಸ್ಕರ್ ರಿತೇಶ್ ಸ್ಟಂಟ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಿಸಿಟಿವಿ ಫೊಟೇಜ್ ವೈರಲ್ ಆಗಿದೆ. 
 
ಈ ಹಿಂದೆ ಬಾಲಿವುಡ್ ಹಲವು ನಟರು ತಮ್ಮ ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದುಂಟು. ಹಾಗಾಗಿ ರಿತೇಶ್ ದೇಶಮುಖ್ ಸಹ ಈ ರೀತಿ ಮಾಡಿರಬಹುದು ಎಂದು ಹೇಳಲಾಗ್ತಿದೆ. ಇನ್ನೂ ರಿತೇಶ್ ದೇಶಮುಖ್ ತಮ್ಮ ಮುಂಬರುವ ಚಿತ್ರ ಹೌಸ್‌ಫುಲ್ -3 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿರಬಹುದು ಎನ್ನಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ