ಸಿಂಧುಗೆ ಸೆಲ್ಯೂಟ್ ಹೊಡೆದ ನಟ-ನಟಿಯರು

ಶನಿವಾರ, 20 ಆಗಸ್ಟ್ 2016 (10:41 IST)
ಒಲಿಂಪಿಕ್ಸ್ ಕ್ರೀಡಾಕೂಟದ ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಕ್ಕಿರೋದು ನಿಮಗೆಲ್ಲಾ ಗೊತ್ತಿದೆ. ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ದಕ್ಷಿಣ ಭಾರತದ ಆಟಗಾರ್ತಿ ಸಿಂಧು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ಹಲವು ನಟ ನಟಿಯರು ಸಿಂಧುಗೆ ಸೆಲ್ಯೂಟ್ ಹೊಡೆದಿದ್ದಾರೆ. ಈ ಬಗ್ಗೆ  ನಟ-ನಟಿಯರಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ.
ಯಾರು ನಿರೀಕ್ಷಿಸಿದ ರೀತಿಯಲ್ಲಿ ಒಲಿಂಪಿಕ್ಸ್ ಕನಸಿಗೆ ನೀರೆದಿದ್ದಾರೆ.ಅಲ್ಲದೇ ಟಿವಿ ಇಂಡಸ್ಟ್ರಿಯ ಹಲವು ನಟ-ನಟಿಯರು ಸಿಲ್ವರ್ ಮೆಡಲ್ ತೆಗೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಿ.ವಿ ಸಿಂಧುಗೆ ಹೃದಯ ಪೂರ್ವಕವಾಗಿ ಶುಭಾಷಯ ಕೋರಿದ್ದಾರೆ. 

 
ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ತನ್ನ ತಾಯಿಯ ಜತೆಗೆ ಸಿಂಧು ಆಟವನ್ನು ಟಿವಿಯಲ್ಲಿ ವೀಕ್ಷಿಸಿದ್ದಾರಂತೆ. ನಾನು ನನ್ನ ತಾಯಿಗೆ ಹೇಳಿದ್ದೇನೆ ನಾನು ಸಿಂಧು ಜತೆಗೆ ಫೊಟೋ ತೆಗೆದುಕೊಳ್ತೇನೆ ಎಂದು, ಅದರಂತೆ ಸಲ್ಲು ಸಿಂಧು ಜತೆಗೆ ಫೊಟೋ ತೆಗೆದುಕೊಂಡಿದ್ದಾರೆ.
 
ನಟಿ ವಿದ್ಯಾ ಬಾಲನ್ ಕೂಡ ಸಿಂಧು ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿಂಧು ಗಾಡ್ ಬ್ಲೆಸ್ ಯೂ ಎಂದು ಟ್ವಿಟ್ ಮಾಡಿದ್ದಾರೆ. 
ಇನ್ನೂ ಸನ್ನಿ ಲಿಯೋನ್, ಖ್ಯಾತ ನಿರ್ಮಾಪಕ ಮಹೇಶ್ ಭಟ್, ಹಾಗೂ ಆಲಿಯಾ ಭಟ್, ಶ್ರದ್ಧಾ ಕಪೂರ್, ಹಿರಿಯ ತಾರೆ ಹೇಮಾ ಮಾಲಿನಿ, ರಿಚ್ಚಾ ಚಂಡಾ, ಹೃತಿಕ್ ರೋಷನ್ ಮೊದಲಾದವರು ಟ್ವಿಟ್ ಮಾಡಿ ಶುಭ ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ