ನೀವ್ಯಾಕೆ ಕೆಲಸ ಮಾಡ್ತೀರಿ? ಮಗುವಿನ ಪ್ರಶ್ನೆಗೆ ಅಮಿತಾಭ್ ಬಚ್ಚನ್ ತಬ್ಬಿಬ್ಬು
ಇತ್ತೀಚೆಗೆ ನಡೆದ ಘಟನೆಯೊಂದನ್ನು ಅಮಿತಾಭ್ ಹಂಚಿಕೊಂಡಿದ್ದಾರೆ. ಜಾಹೀರಾತಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಮಗುವೊಂದು ನೀವ್ಯಾಕೆ ಈ ವಯಸ್ಸಲ್ಲೂ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದೆಯಂತೆ.
ಆ ಮಗು ನನ್ನಲ್ಲಿ ನಿಮಗೆ ಎಷ್ಟು ವಯಸ್ಸು ಎಂದು ಕೇಳಿತು. ನಾನು 80 ಎಂದೆ. ಆಗ ಆತ ನನ್ನ ಮನೆಯಲ್ಲಿ ಅಜ್ಜಿ-ತಾತ ಇದ್ದಾರೆ. ಅವರಿಗೂ ನಿಮ್ಮಷ್ಟೇ ವಯಸ್ಸು. ಆದರೆ ಅವರೆಲ್ಲಾ ಮನೆಯಲ್ಲಿ ಆರಾಮವಾಗಿರ್ತಾರೆ. ನೀವ್ಯಾಕೆ ಈ ವಯಸ್ಸಲ್ಲಿ ಕೆಲಸ ಮಾಡ್ತೀರಿ? ಆರಾಮವಾಗಿರಬಹುದಲ್ವಾ ಎಂದು ಕೇಳಿತು. ಆ ಪ್ರಶ್ನೆಗೆ ನನ್ನಲ್ಲಿ ಉತ್ತರವೇ ಇರಲಿಲ್ಲ ಎಂದು ಅಮಿತಾಭ್ ಹೇಳಿದ್ದಾರೆ.