ಕನ್ಫರ್ಮ್: ರಾಣಿ ಮುಖರ್ಜಿ ತಾಯಾಗುತ್ತಿರುವುದು ಹೌದಂತೆ!

ಮಂಗಳವಾರ, 1 ಸೆಪ್ಟಂಬರ್ 2015 (12:43 IST)
ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ಬೆಡಗಿ ರಾಣಿ ಮುಖರ್ಜಿ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಆ ಸುದ್ದಿ ಖಚಿತಗೊಂಡಿದೆ. ರಾಣಿ ಜನವರಿ ತಿಂಗಳಲ್ಲಿ ಮುದ್ದುಮಗುವನ್ನು ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ವೈಯಕ್ತಿಕ ವಿಷಯಗಳನ್ನು ಬಹಿರಂಗ ಪಡಿಸಲು ಸದಾ ಹಿಂಜರಿಯುವ ರಾಣಿ ಈ ಸುದ್ದಿಯನ್ನು ಬಹಿರಂಗ ಪಡಿಸಿಲ್ಲವಾದರೂ  ಸುದ್ದಿ ಮೂಲಗಳ ಪ್ರಕಾರ ಅವರೀಗ 6 ತಿಂಗಳ ಗರ್ಭಿಣಿಯಾಗಿದ್ದಾರೆ. ಅವರ ಅತ್ತಿಗೆ, ನಟಿ ಜ್ಯೋತಿ ಮುಖರ್ಜಿ ರಾಣಿ ಗರ್ಭಿಣಿ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ಪತ್ರಿಕೆಯೊಂದು ಸುದ್ದಿ ಪ್ರಕಟಿಸಿದೆ. 
 
ಎಪ್ರಿಲ್ 21, 2014ರಲ್ಲಿ ಇಟಲಿಯಲ್ಲಿ ಗುಟ್ಟಾಗಿ ನಿರ್ಮಾಪಕ ಆದಿತ್ಯ ಚೋಪ್ರಾರವರನ್ನು ವರಿಸಿದ್ದ ಮರ್ದಾನಿ ಖ್ಯಾತಿಯ ರಾಣಿ ಸದ್ಯ ದಾಂಪತ್ಯ ಜೀವನದಲ್ಲಿ ವ್ಯಸ್ತರಾಗಿದ್ದಾರೆ. 
 
37ರ ಹರೆಯದ ರಾಣಿ  ಈಚೆಗೆ ಲಂಡನ್‌ನಲ್ಲಿ ಇದ್ದಾಗ ಆಕೆ ಗರ್ಭಿಣಿ ಎಂಬ ವದಂತಿಗಳು ಹರಡಿಕೊಂಡಿದ್ದವು. ಈಗಲೂ ರಾಣಿ ಮತ್ತು ಆಕೆಯ ಪತಿ ಆದಿತ್ಯ ವಿದೇಶದಲ್ಲಿಯೇ ಇದ್ದಾರೆ. 

ವೆಬ್ದುನಿಯಾವನ್ನು ಓದಿ