39ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಭೂಪತಿ ದರ್ಶನ್

ಮಂಗಳವಾರ, 16 ಫೆಬ್ರವರಿ 2016 (20:35 IST)
ಕನ್ನಡದ ಚಿತ್ರರಂಗದ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ನಿನ್ನೆ ತಮ್ಮ 39 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಲು ಅಭಿಮಾನಿಗಳ ದಂಡೇ ದರ್ಶನ್ ನಿವಾಸದತ್ತ ಹರಿದು ಬಂದಿತ್ತು.
 
ಮೊನ್ನೆ ತಡ ರಾತ್ರಿಯೇ ದರ್ಶನ್ ಅವರ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದ ಬಳಿ ಆಗಮಿಸಿದ ಅಭಿಮಾನಿಗಳು ತಾವು ತಂದಿದ್ದ ಕೇಕ್ ಗಳನ್ನು ದರ್ಶನ್ ಅವರ ಕೈಯಿಂದ ಕತ್ತರಿಸಿ ಅವರಿಗೆ ಶುಭಾಶಯ ಕೋರಿದ್ರು. ಇನ್ನು ಅಭಿಮಾನಿಗಳ ಪ್ರೀತಿ ಕಂಡು ದರ್ಶನ್ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಪ್ರತಿ ವರ್ಷ ದರ್ಶನ್ ಅವರ ಅಭಿಮಾನಿಗಳಿಗೆ ಹುಟ್ಟುಹಬ್ಬದಂದು ಸ್ಪೆಷಲ್ ಗಿಫ್ಟ್ ನೀಡುತ್ತಾರೆ. ಈ ಬಾರಿಯ ಬರ್ತಡೇಗೆ ದರ್ಶನ್ ಅವರು ಅಭಿಮಾನಿಗಳಿಗೆ ತಮ್ಮ ಜಗ್ಗು ದಾದಾ ಸಿನಿಮಾ ಟೀಸರ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ.
 
ಜಗ್ಗುದಾದ ಸಿನಿಮಾವನ್ನು ರಾಘವೇಂದ್ರ ಹೆಗ್ಡೆ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ದರ್ಶನ್ ಅವರ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾದ ಸಿನಿವಾಮಂತೆ. ಇಷ್ಟು ದಿನ ಆಕ್ಷನ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ದರ್ಶನ್ ಈ ಸಿನಿಮಾದಲ್ಲಿ ಹೋಮ್ಲಿ ಹಾಗೂ ಆಕ್ಷನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ