ಅಪ್ಪನಂತೆ ವಿನೀಶ್ ತೂಗುದೀಪ್ ಗೆ ಪ್ರಾಣಿಗಳ ಮೇಲೆ ಲವ್ವಂತೆ

ಗುರುವಾರ, 18 ಆಗಸ್ಟ್ 2016 (09:34 IST)
ನಟ ದರ್ಶನ್ ತೂಗುದೀಪ್ ಅವರಿಗೆ ಪ್ರಾಣಿ ಪಕ್ಷಿಗಳು ಅಂದ್ರೆ ಅದೆಷ್ಟು ಕ್ರೇಜ್ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ.ದರ್ಶನ್ ಅವರು ಇಳ್ಲಿರೋ ಪ್ರಾಮಿ ಪಕ್ಷಿಗಳು ಸಾಕಾಗಲ್ಲ ಅಂತಾ ಆಗಾಗ್ಗೆ ವಿದೇಶಗಳಿಂದಲೂ ತಮ್ಮಿಷ್ಟದ ಪಕ್ಷಿಗಳನ್ನು ತಂದು ಸಾಗುತ್ತಿದ್ದಾರೆ. ಅವರ ಫಾರ್ಮ್ ಹೌಸ್ ಗೆ ಹೋದ್ರೆ ಗೊತ್ತಾಗುತ್ತೆ ಅವರಿಗೆ ಪ್ರಾಣಿ ಪಕ್ಷಿಗಳು ಅಂದ್ರೆ ಎಷ್ಟು ಪ್ರೀತಿ ಅಂತಾ.


ದರ್ಶನ್ ಅವರಿಗೆ ಬಾಲ್ಯದಿಂದಲೂ ಪ್ರಾಣಿ ಪಕ್ಷಿಗಳ ಮೇಲೆ ವಿಶೇಷ ಒಲವು. ಪುಟ್ಟ ಹುಡುಗನಾಗಿದ್ದಾಗಲೇ ಅವರು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದರು.ಅದನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ದರ್ಶನ್ ಅವರ ಪ್ರಾಣಿ ಪ್ರೀತಿ ಅವರ ಮಗನಿಗೂ ಬಂದಿದೆಯಂತೆ.

ವಿನೀಶ್ ಗೂ ಪ್ರಾಣಿ ಪಕ್ಷಿಗಳು ಅಂದ್ರೆ ತುಂಬಾನೇ ಇಷ್ಟವಂತೆ. ಹಾಗಂಥ ದರ್ಶನ್ ಪತ್ನಿ ವಿಜಯಲಕ್ಷ್ಮೀ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಪ್ರಾಣಿ ಪಕ್ಷಿಗಳು ಸಿಕ್ರೂ ವಿನೀಶ್ ಅವುಗಳ ಜೊತೆಗೆ ತುಂಬಾನೇ ಖುಶಿಯಾಗಿ ಕಾಲ ಕಳೆಯುತ್ತಾನಂತೆ.

ಇನ್ನು ನಟ ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ  ಪ್ರಾಣಿ ಪಕ್ಷಿಗಳನ್ನು ಸಾಕೋದು ಮಾತ್ರವಲ್ಲದೇ ಮೈಸೂರಿನ ಜೂ ನಲ್ಲಿರೋ ಆನೆ, ಹುಲಿಗಳಿನ್ನ ದತ್ತು ತೆಗೆದುಕೊಂಡಿದ್ದಾರೆ . ಅವುಗಳಿಗಾಗಿ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಾರೆ.. ಮುಂದೊಂದು ದಿನ ದೊಡ್ಡವನಾದ ಬಳಿಕ ವಿನೀಶ್ ಕೂಡ ದರ್ಶನ್ ಅವರ ರೀತಿಯೇ ಪ್ರಾಣಿ ಗಳನ್ನು ಸಾಕೋದಕ್ಕೆ ಆರಂಭಿಸಿದ್ರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ