ಮುಂದಿನ ವರ್ಷ ವಿವಾಹವಾಗುತ್ತಿದ್ದಾರಂತೆ ದೀಪಿಕಾ ಹಾಗೂ ರಣ್‌ವೀರ್

ಬುಧವಾರ, 13 ಜುಲೈ 2016 (09:27 IST)
ರಣ್‌ವೀರ್ ಹಾಗೂ ದೀಪಿಕಾ ಪಡುಕೋಣೆ ವಿವಾಹವಾಗುತ್ತಿದ್ದಾರೆ ಅನ್ನೋ ಸುದ್ದಿ ಕಳೆದ ಎರಡು ವರ್ಷಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಾನೇ ಇದೆ. ಇನ್ನು ಮೊನ್ನೆ ಮೊನ್ನೆ ತಾನೇ ಇವರಿಬ್ಬರ ನಿಶ್ಚತಾರ್ಥ ಆಯ್ತು ಅನ್ನೋದು ಸುದ್ದಿಯಾಗಿತು. ಆದ್ರೀಗ ಮತ್ತೊಂದು ಹೊಸ ಸುದ್ದಿ ಕೇಳಿ ಬರುತ್ತಿದೆ.

ಹೌದು.. ದೀಪಿಕಾ ಹಾಗೂ ರಣ್ ವೀರ್ ಸಿಂಗ್ ಶೀಘ್ರದಲ್ಲಿ ವಿವಾಹವಾಗುತ್ತಿದ್ದಾರೆ ಅನ್ನೋ ಸುದ್ದಿ ಬಹು ದಿನಗಳಿಂದ ಬರುತ್ತಿದೆ. ಮುಂದಿನ ವರ್ಷ ಅಂದ್ರೆ 2017ರಲ್ಲಿ ದೀಪಿಕಾ ಹಾಗೂ ರಣ್‌ವೀರ್ ವಿವಾಹವಾಗೋದಕ್ಕೆ ನಿರ್ಧರಿಸಿದ್ದಾರಂತೆ. ಈಗಾಗಲೇ ತಮ್ಮ ವಿವಾಹದ ಪ್ಲಾನ್ ಬಗ್ಗೆ ದೀಪಿಕಾ ಹಾಗೂ ರಣ್ ವೀರ್ ತಮ್ಮ ತಮ್ಮ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರಂತೆ. ಎರಡು ಕುಟುಂಬಗಳು ಕೂಡ ವಿವಾಹವನ್ನು ಅದ್ಧೂರಿಯಾಗಿ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿವೆಯಂತೆ.ಇನ್ನು ಮೊನ್ನೆ ತಾನೇ ರಣ್ ವೀರ್ ಹಾಗೂ ದೀಪಿಕಾ ಕುಟುಂಬದವರೊಂದಿಗೆ ಆಸ್ಟ್ರೇಲಿಯಾಕ್ಕೆ ಹಾಲಿಡೇಗಾಗಿ ಹೋಗಿ ಬಂದಿದ್ದರು.
 
ಇನ್ನು  ಹಿಂದೆ ದೀಪಿಕಾ ವಿವಾಹವಾಗೋದಕ್ಕೆ ರಣ್ ವೀರ್ ಸಿಂಗ್ ಅವರ ಬಳಿ ಎರಡು ವರ್ಷ ಕಾಲಾವಕಾಶ ಕೇಳಿದ್ದಾರೆ ಅಂತಾ ಸುದ್ದಿಯಾಗಿತ್ತು. ಇದೀಗ ದೀಪಿಕಾ ವಿವಾಹವಾಗುತ್ತಿದ್ದಾರೆ ಅನ್ನೋ ಸುದ್ದಿ ಕೇಳಿದ್ರೆ ಅವರು ತಮ್ಮ ನಿರ್ಧಾರವನ್ನು ಬದಲಿಸಿದಂತೆ ಕಾಣುತ್ತೆ. ಸುದ್ದಿ ನಿಜವಾದ್ರೆ ಮಹಾ ಮದುವೆಯೊಂದಕ್ಕೆ ಬಾಲಿವುಡ್ ಸಾಕ್ಷಿಯಾಗಲಿದೆ.

ವೆಬ್ದುನಿಯಾವನ್ನು ಓದಿ