ಬಾಲಿವುಡ್ನಿಂದ ಹಾಲಿವುಡ್ಗೆ ನೆಗೆದ ಬೆಡಗಿಯರಲ್ಲಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಪ್ರಮುಖರು. ಕ್ವಾಂಟಿಕೋ ಟಿವಿ ಸರಣಿಯಲ್ಲಿ ಖ್ಯಾತಳಾಗಿರುವ ಪ್ರಿಯಾಂಕಾ ಶೀಘ್ರದಲ್ಲೇ ಬೇವಾಚ್ ಸಿನಿಮಾ ಮೂಲಕ ಹಾಲಿವುಡ್ ಬೆಳ್ಳಿಪರದೆ ಅಲಂಕರಿಸಲಿದ್ದಾಳೆ.
ಚೀನಾದ ಹುಡುಗ ಮತ್ತು ಭಾರತದ ಹುಡುಗಿ ನಡಿನ ಪ್ರೇಮಕಥೆಯನು ತೆರೆಗೆ ತರಲಿದ್ದಾರೆ. ಇದರಲ್ಲಿ ಹೀರೋ ಆಗಿ ಚೀನಾದ ಡೆಂಗ್ ಛಾವೋ ಅಭಿನಯಿಸುವ ಸಾಧ್ಯತೆಗಳಿವೆ. ನಾಯಕಿಗಾಗಿ ಪ್ರಿಯಾಂಕಾ, ದೀಪಿಕಾ ಹೆಸರುಗಳು ಕೇಳಿಬಂದಿದ್ದು ಕೊನೆಯದಾಗಿ ದೀಪಿಕಾ ಆಯ್ಕೆಯಾಗಿದ್ದಾರೆ. "ಇದು ಇಂಡಿಯನ್ ಚೈನೀಸ್ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಸಾಗುವ ಕಥೆ. ಉಳಿದ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ" ಎಂದಿದ್ದಾರೆ ಸಿದ್ಧಾರ್ಥ್.