ಸಂಭಾವನೆ ವಿಷಯದಲ್ಲಿ ಸ್ಟಾರ್ ನಟರನ್ನೂ ಹಿಂದಿಕ್ಕಿದ ಆ ನಟಿ ಯಾರು…?

ಗುರುವಾರ, 31 ಆಗಸ್ಟ್ 2017 (13:30 IST)
ಮುಂಬೈ: ಇತ್ತೀಚಿಗಷ್ಟೇ ಫೋರ್ಬ್ಸ್ ತನ್ನ ನಿಯತಕಾಲಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ-ನಟಿಯರ ಪಟ್ಟಿ ಬಿಡುಗಡೆ ಮಾಡಿತ್ತು. ಕಳೆದ ವರ್ಷ ಟಾಪ್ 10ರಲ್ಲಿ 10ನೇ ಸ್ಥಾನ ಪಡೆದಿದ್ದ ದೀಪಿಕಾ ಪಡುಕೋಣೆ ಈ ಬಾರಿ ಯಾವ ಸ್ಥಾನವೂ ಗಳಿಸಿರಲಿಲ್ಲ. ಆದರೆ ಈಗ ಬಿಟೌನ್ ನ ಈ ನ್ಯೂಸ್ ಕೇಳಿದರೆ ಖಂಡಿತ ಶಾಕ್ ಆಗ್ತೀರಾ…


ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ದೀಪಿಕಾ ಅಗ್ರ ಸ್ಥಾನದಲ್ಲಿದ್ದಾರೆ. ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ. ಈ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮೊದಲ ನಟಿಯಾಗಿದ್ದಾರೆ.

ದೀಪಿಕಾ ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಹಿಸ್ಟಾರಿಕಲ್ ಮೂವಿ `ಪದ್ಮಾವತಿ’ಯಲ್ಲಿ ನಟಿಸುತ್ತಿದ್ದು, ಈ ಚಿತ್ರದ ನಟನೆಗಾಗಿ 13 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಈ ಚಿತ್ರದ ನಟರಾದ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ತಲಾ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ