ಬೆಂಗಳೂರು: ನಟ ದರ್ಶನ್ ಮತ್ತೆ ಅರೆಸ್ಟ್ ಆಗಿರುವುದಕ್ಕೆ ನಟಿ ರಮ್ಯಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನನಗೆ ಇದರಿಂದ ಬೇಸರವಾಗಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಪಡಿಸಿದ ಬಳಿಕ ನಟ ದರ್ಶನ್ ಮತ್ತು ಪ್ರಮುಖ ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಮಾಧ್ಯಮ ಸಂದರ್ಶನವೊಂದರಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೊನ್ನೆಯಷ್ಟೇ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ದರ್ಶನ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದ ರಮ್ಯಾ ಈಗ ಅವರು ಅರೆಸ್ಟ್ ಆಗಿರುವುದಕ್ಕೆ ಬೇಸರವಿದೆ ಎಂದಿದ್ದಾರೆ. ದರ್ಶನ್ ತಾವೇ ತಮ್ಮ ಲೈಫ್ ಹಾಳು ಮಾಡಿಕೊಂಡರು. ಹಳೆಯ ದಿನಗಳು ತುಂಬಾ ಚೆನ್ನಾಗಿತ್ತು. ಲೈಟ್ ಮ್ಯಾನ್ ಆಗಿ ಅವರು ಇಂಡಸ್ಟ್ರಿಗೆ ಬಂದವರು. ಅವರು ಅರೆಸ್ಟ್ ಆಗಿದ್ದು ಬೇಸರ ತಂದಿದೆ ಎಂದಿದ್ದಾರೆ.
ಇನ್ನು ಪವಿತ್ರಾ ಗೌಡ ಬಗ್ಗೆಯೂ ಮಾತನಾಡಿರುವ ರಮ್ಯಾ, ನನಗೆ ಆಕೆಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಒಬ್ಬ ಮಗಳಿದ್ದಾಳೆ ಎಂದೆಲ್ಲಾ ಗೊತ್ತು. ದರ್ಶನ್ ಗೆ ತಕ್ಕ ಶಿಕ್ಷೆಯಾಗಬೇಕು ಎಂದು ರಮ್ಯಾ ಈ ಹಿಂದೆ ಆಗ್ರಹಿಸಿದ್ದರು.