ಗೆಹರಾಯಿ ಟ್ರೈಲರ್ ನಲ್ಲಿ ದೀಪಿಕಾ ಪಡುಕೋಣೆ ಹಸಿಬಿಸಿ ದೃಶ್ಯಗಳಿಗೆ ವೀಕ್ಷಕರು ಬೌಲ್ಡ್
ಗೆಹರಾಯಿ ಎನ್ನುವ ದೀಪಿಕಾ ನಾಯಕಿಯಾಗಿರುವ ಸಿನಿಮಾದ ಟ್ರೈಲರ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವ್ಯೂ ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲೂ ಟ್ರೆಂಡ್ ಆಗಿದೆ.
ಇದಕ್ಕೆ ಕಾರಣ ಈ ಸಿನಿಮಾದಲ್ಲಿ ದೀಪಿಕಾ ನಾಯಕ ಸಿದ್ಧಾಂತ್ ಚತುರ್ವೇದಿ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು. ದೀಪಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಈ ಸಿನಿಮಾ ಒಬ್ಬ ವಿವಾಹಿತ ಮಹಿಳೆ ಮತ್ತು ನಿಶ್ಚಿತಾರ್ಥ ಮಾಡಿಕೊಂಡಿರುವ ಯುವಕನ ನಡುವೆ ನಡೆಯುವ ಪ್ರೇಮ ಕತೆಯನ್ನು ಹೊಂದಿದೆಯಂತೆ. ಸದ್ಯದಲ್ಲೇ ಇದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.