ಮುಂದಿನ ತಿಂಗಳಿನಿಂದ ದೀಪಿಕಾ ತಮ್ಮ ಹಾಲಿವುಡ್ ಸಿನಿಮಾ xxx ಸಿರೀಸ್ ನ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆಯೇ ಸಿನಿಮಾದ ನಿರ್ದೇಶಕರಾದ ಡಿ ಜೆ ಕರ್ಸೋ ನಾವು ಜನವರಿಯಲ್ಲಿ ಶೂಟಿಂಗ್ ಆರಂಭಿಸುತ್ತೇವೆ. ದೀಪಿಕಾ ಅವರು ಫೆಬ್ರವರಿಯಲ್ಲಿ ನಮ್ಮ ತಂಡ ಸೇರಿಕೊಳ್ಳುತ್ತಾರೆ ಅಂತಾ ಹೇಳಿದ್ದರು. ಇದೀಗ ಸಿನಿಮಾದ ಶೂಟಿಂಗ್ ಆರಂಭವಾಗಿದದು ಮುಂದಿನ ತಿಂಗಳಿನಿಂದ ದೀಪಿಕಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದಿಂದಾಗಿ ದೀಪಿಕಾಗೆ ಮತ್ತಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಸಿಗೋ ಸಾಧ್ಯತೆಯಿದೆ.