ಅತ್ತೆ-ಸೊಸೆ ಮೇಲೆ ವಾಟ್ಸಾಪ್‌ನಲ್ಲಿ ಜೋಕ್‌ಗಳು

ಬುಧವಾರ, 4 ಜನವರಿ 2017 (14:26 IST)
ನರೇಂದ್ರ ಮೋದಿ ಅವರು ಅಧಿಕ ಮೌಲ್ಯದ ನೋಟುಗಳನ್ನು ರದ್ದುಪಡಿಸಿದ ಮೇಲೆ ಸಾಮಾನ್ಯ ಜನ ಸ್ವಲ್ಪ ತೊಂದರೆ ಅನುಭವಿಸಬೇಕಾಯಿತು. ಕೇವಲ ಸಾಮಾನ್ಯರಿಗಷ್ಟೇ ಅಲ್ಲ, ಕೆಲವು ಮಂದಿ ಸೆಲೆಬ್ರಿಟಿಗಳಿಗೂ ಈ ಬಿಸಿ ತಾಕಿದೆ ಎಂಬ ಜೋಕ್‌ಗಳು ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿವೆ.
 
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬ ಸಹ ನೋಟು ಅಮಾನ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿದೆ ಎಂಬ ಜೋಕುಗಳು ವಾಟ್ಸಾಫ್‌ನಲ್ಲಿ ಹರಿದಾಡುತ್ತಿವೆ. ಒಂದೇ ಸೀರೆಯನ್ನು ಅಮಿತಾಬ್ ಪತ್ನಿ ಜಯಾ ಬಚ್ಚನ್, ಸೊಸೆ ಐಶ್ವರ್ಯಾ ರೈ ಬೇರೆಬೇರೆ ಸಂದರ್ಭಗಳಲ್ಲಿ ಉಟ್ಟಿರುವುದು ನೋಟು ಸಮಸ್ಯೆಯಿಂದ ಎಂಬಂತೆ ಜೋಕುಗಳು ವಾಟ್ಸಾಪ್‍ನಲ್ಲಿ ಹಂಚಿಕೆಯಾಗುತ್ತಿವೆ. 
 
ಒಂದೇ ವಿನ್ಯಾಸ ಕೆಂಪು ಸೀರೆಯನ್ನು ಅತ್ತೆ-ಸೊಸೆ ಬೇರೆಬೇರೆ ಸಂದರ್ಭಗಳಲ್ಲಿ ಉಟ್ಟಿಕೊಂಡಿದ್ದರು. ಸೆಪ್ಟೆಂಬರ್‌ನಲ್ಲೆ ಈ ಫೋಟೋಗಳು ಬಿಡುಗಡೆಯಾಗಿದ್ದವು. ಆದರೆ ಈಗ ಆ ಫೋಟೋಗಳನ್ನು ನೋಟು ಅಮಾನ್ಯತೆಗೆ ಬಳಸಿಕೊಂಡು ಜೋಕ್‍ಗಳನ್ನು ಹರಿಯಬಿಡಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ