ದೇವಿ ಚಿತ್ರದ ಫಸ್ಟ್ ಲುಕ್ ಔಟ್..ತಮ್ಮನ್ನಾ ಬಾಟಿಯಾ-ಪ್ರಭು ದೇವ್ ನಟನೆ

ಶುಕ್ರವಾರ, 17 ಜೂನ್ 2016 (17:40 IST)
ಪ್ರಭು ದೇವ್ ಹಾಗೂ ತಮ್ಮನ್ನಾ ಭಾಟಿಯಾ ಅಭಿನಯದ 'ಹಾರರ್ 'ಚಿತ್ರ 'ದೇವಿ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಚಿತ್ರ ಹಳೆ ಹಾರರ್ ಫಿಲ್ಮಂ ಹಾಗೇ ಮೂಡಿ ಬಂದಿದ್ದು. ಈ ಚಿತ್ರದಲ್ಲಿ ಪ್ರಭು ದೇವ ಹಾಗೂ ತಮ್ಮನ್ನಾರನ್ನು ನೋಡಲು ಪ್ರೇಕ್ಷಕರು ಕೂತುಹಲದಲ್ಲಿದ್ದಾರೆ. 

 
ಮತ್ತೆ ಪ್ರಭು ದೇವ ಹಾಗೂ ತಮ್ಮನ್ನಾ ಹಾರರ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇನ್ನೂ ದೇವಿ ಎನ್ನುವುದು ತಮಿಳು ಎಂದು ಕರೆದ್ರೆ, ಅಭಿನೇತ್ರಿ ಅಂತ ತೆಲಗುವಿನಲ್ಲಿ ಚಿತ್ರದ ಟೈಟಲ್ ಮೂಡಿ ಬಂದಿದೆ.

ಪ್ರಮುಖ ಪಾತ್ರದಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕಂತು ಫೈನಲ್ ಆಗಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಹರ್ಷ ತಂದಿದೆ.
 
ಇನ್ನೂ ತಮನ್ನಾ ಭಾಟಿಯಾ ಈ ಚಿತ್ರದಲ್ಲಿ ಕಪ್ಪು ಬಣ್ಣದ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಂಧನದಲ್ಲಿರುವ ಚಿತ್ರದ ಪೋಸ್ ನಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ. ಹಳೆ ತಮಿಳು ಹಾರರ್ ಚಿತ್ರಗಳನ್ನು ನೆನಪಿಸಿರುವ ಈ ಚಿತ್ರ ಯಾವಾಗ ರೀಲಿಸ್ ಆಗುತ್ತೋ ಅಂತ ಅಭಿಮಾನಿಗಳು ಕಾತುರದಲ್ಲಿದ್ದಾರೆ.

ದಕ್ಷಿಣ ಭಾರತದ ನಟಿ ತಮನ್ನಾ ಭಾಟಿಯಾ ಇದೀಗ ಬಾಹುಬಲಿ-2 ಚಿತ್ರಕ್ಕಾಗಿ ಕುದುರೆ ಓಡಿಸುವುದನ್ನು ಕಲಿತಿದ್ದಾರಂತೆ. ಎಸ್. ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರಕ್ಕಾಗಿ ತಮನ್ನಾ ಕುದುರೆ ಓಡಿಸುವುದನ್ನು ಕಲಿಯುತ್ತಿದ್ದಾರಂತೆ.
ಚಿತ್ರಗಳಲ್ಲಿನ ಕೆಲ ಆ್ಯಕ್ಷನ್ ಪಾತ್ರಗಳಿಗಾಗಿ ತಮನ್ನಾ ಕುದುರೆ ಓಡಿಸಿದ್ದಾರೆ. ನಾನು ಇದನ್ನು ಎಂಜಾಯ್ ಮಾಡುತ್ತಿದ್ದೇನೆ. ಇದರಿಂದ ಪ್ರಕೃತಿಗೆ ತುಂಬಾ ಹತ್ತಿರವಾಗಿದ್ದೇನೆ ಎಂದು ಭಾಸವಾಗುತ್ತದೆ ಎಂದು ತಮನ್ನಾ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ