ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

Krishnaveni K

ಗುರುವಾರ, 17 ಜುಲೈ 2025 (13:45 IST)
ಬೆಂಗಳೂರು: ಕನ್ನಡದ ಜನಪ್ರಿಯ ಆಂಕರ್ ಕಮ್ ನಟಿ ಅನುಶ್ರೀ ಮದುವೆ ಕೊನೆಗೂ ಫಿಕ್ಸ್ ಆಗಿದೆ. ಈಗಾಗಲೇ ಹಲವು ಬಾರಿ ಆಂಕರ್ ಅನುಶ್ರೀ ಮದುವೆ ಬಗ್ಗೆ ರೂಮರ್ ಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ನಿಜವಾಗಿಯೂ ಅನುಶ್ರೀ ಮದುವೆಯಾಗುತ್ತಿದ್ದಾರೆ.

ಆಗಸ್ಟ್ 28 ಕ್ಕೆ ಅನುಶ್ರೀ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಅನುಶ್ರೀ ಕಡೆಯಿಂದ ಅಧಿಕೃತ ಪ್ರಕಟಣೆ ಬರುವುದಷ್ಟೇ ಬಾಕಿಯಿದೆ. ಬೆಂಗಳೂರಿನ ಟೆಕಿ ರೋಹನ್ ಎಂಬವರೊಂದಿಗೆ ಅನುಶ್ರೀ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಇದಿನ್ನೂ ಅಧಿಕೃತವಾಗಬೇಕಿದೆಯಷ್ಟೇ. ಆದರೆ ಮೂಲಗಳ ಪ್ರಕಾರ ಮನೆಯವರೇ ನೋಡಿ ನಿಶ್ಚಯಿಸಿದ ಹುಡುಗನ ಜೊತೆ ಅನುಶ್ರೀ ಮದುವೆಯಾಗಲಿದ್ದಾರಂತೆ. ಬೆಂಗಳೂರಿನಲ್ಲೇ ಮದುವೆ ಮತ್ತು ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ ಎಂಬ ಸುದ್ದಿ ಹರಿದಾಡಿದೆ.

ಆಂಕರ್ ಅನುಶ್ರೀ ಎಲ್ಲೇ ಹೋದರೂ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಲೇ ಇದ್ದರು. ಕೆಲವು ಯೂ ಟ್ಯೂಬ್ ಚಾನೆಲ್ ಗಳಲ್ಲಂತೂ ಹಲವರ ಜೊತೆ ಅನುಶ್ರೀ ಮದುವೆಯಾಗಿದ್ದೂ ಇದೆ!  ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಅನುಶ್ರೀಯೇ ಹಲವು ಬಾರಿ ತಮಾಷೆ ಮಾಡಿದ್ದರು. ಆದರೆ ಇತ್ತೀಚೆಗೆ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಇದೇ ವರ್ಷ ಮದುವೆಯಾಗುವುದಾಗಿ ಹೇಳಿದ್ದರು. ಅದೀಗ ನಿಜವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ