ಸ್ನೇಹಿತನ ತೂಕದ ಬಗ್ಗೆ ಗೇಲಿ ಮಾಡಿದ ನಟಿ ಪರಿಣಿತಿ ಛೋಪ್ರಾ..ಹಲವರ ಟೀಕೆ

ಶನಿವಾರ, 20 ಆಗಸ್ಟ್ 2016 (15:53 IST)
ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ತಮ್ಮ ಸ್ನೇಹಿತನ ಬೊಜ್ಜು ದೇಹದ ಬಗ್ಗೆ ಅಪಹಾಸ್ಯ ಮಾಡಿ ಹಲವು ಜನರಿಂದ ಟೀಕೆಗೆ ಗುರಿಯಾಗಿದ್ದಾರೆ. ಕಳೆದ ವಾರದಂದು ತಮ್ಮ ಸ್ನೇಹಿತನಿಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವಂತೆ ಗೇಲಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸುಮಾರು 9 ತಿಂಗಳುಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು.
ತೂಕ ಕಡಿಮೆ ಮಾಡಲು ಸಾಕಷ್ಟು ಸರ್ಕಸ್ ಮಾಡಿದ್ದ ಪರಿಣಿತಿ, ಅದೇ ತಮ್ಮ ಸ್ನೇಹಿತನ ತೂಕ ಹೆಚ್ಚಳದ ಕುರಿತು ಅಪಹಾಸ್ಯ ಮಾಡಿದ್ದಾರೆ. ಹೀಗೆ ಸ್ನೇಹಿತರ ತೂಕದ ಬಗ್ಗೆ ಗೇಲಿ ಮಾಡಿದ್ದ ಪರಿಣಿತಿ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. 
 
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋವನ್ನು ಪರಿಣಿತಿ, ಆಲಿಯಾ ಜತೆಗೆ ತನ್ನ ಸ್ನೇಹಿತನ ಬರ್ತಡೇಗೆ ವಿಶ್ ಮಾಡಿರುವುದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ತನ್ನ ಸ್ನೇಹಿತನಿಗೆ ಕಡಿಮೆ ತಿನ್ನುವಂತೆ ಹಾಗೂ ತೂಕ ಕಡಿಮೆ ಮಾಡಿಕೊಳ್ಳುವಂತೆ ನಗು ನಗುತ್ತಾ ಸಲಹೆ ನೀಡುತ್ತಿದ್ದಾಳೆ ಪರಿಣಿತಿ. ಹೀಗೆ ಪರಿಣಿತಿ ತಮ್ಮ ಸ್ನೇಹಿತನ ತೂಕದ ಬಗ್ಗೆ ಗೇಲಿ ಮಾಡಿ ಸುದ್ದಿಯಾಗಿದ್ದಾಳೆ.

ಆದ್ರೆ ಈ ಹೇಳಿಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ತೂಕವನ್ನೇ ಕಡಿಮೆ ಮಾಡಿಕೊಂಡಿದ್ದ ಪರಿಣಿತಿ ಛೋಪ್ರಾ, ಇನ್ನೊಬ್ಬರ ತೂಕದ ಬಗ್ಗೇ ಗೇಲಿ ಮಾಡೋದು ಸರಿಯಲ್ಲ ಅಂತ ಹೇಳುತ್ತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ