ಅಮೀರ್ ಖಾನ್ ಚಿತ್ರ ನಿರ್ದೇಶಿಸುವ ಕನಸು ಹೊಂದಿರುವ ಸ್ಟಾರ್ ನಿರ್ದೇಶಕ ರಾಜಮೌಳಿ

ಬುಧವಾರ, 1 ಅಕ್ಟೋಬರ್ 2014 (10:24 IST)
ಅಮೀರ್ ಖಾನ್ ಅವರನ್ನು ಕಂಡ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅವರ ಹೊಸತನ, ಭಿನ್ನತೆ,  ಎಲ್ಲವು ಸಹಿತ ಭಾರತೀಯ ಚಿತ್ರರಂಗದ ಮಾದರಿ ಆಗಿದೆ. ತಮ್ಮ ಪ್ರತಿಯೊಂದು  ಸಿನಿಮಾವನ್ನು ಸಹಿತ ವಿಶೇಷವಾಗಿ ಗುರುತಿಸುವಂತೆ ಮಾಡಿರುವ ಪ್ರತಿಭೆ ಅವರದ್ದು. ಅಮೀರ್ ಖಾನ್ ಅವರನ್ನು ಕಂಡರೆ ಭಾರತೀಯ ಚಿತ್ರರಂಗದ ಎಲ್ಲ ಪ್ರಮುಖರು, ಗಣ್ಯರು ಇಷ್ಟ ಪಡ್ತಾರೆ ಇದಕ್ಕೆ ಟಾಲಿವುಡ್ ನ ಪ್ರಸಿದ್ಧ ನಿರ್ದೇಶಕ ರಾಜಮೌಳಿ ಹೊರತಲ್ಲ. ಈ ಕ್ರೇಜಿ ನಿದೇಶಕ ಈಗ ಬಾಹುಬಲಿ ಚಿತ್ರದ ನಿರ್ದೇಶನದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.  
 
ಸುಮಾರು 180  ಕೋಟಿ ರೂಪಾಯಿಗಳವೆಚ್ಚದಿಂದ ತಯಾರಾಗುತ್ತಿರುವ ಈ ಚಿತ್ರವೂ ತೆರೆ ಕಾಣಿಸುವುದಕ್ಕಾಗಿ ರಾಜಮೌಳಿ ಸಂಪೂರ್ಣವಾಗಿ ತಮ್ಮನ್ನು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತಿಚೆಗೆ ರಾಜಮೌಳಿ ಆಂಗ್ಲ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಂಬರುವ ತನ್ನ ಪ್ರಾಜಕ್ಟ್ ಒಂದರಲ್ಲಿ ಅಮೀರ್ ಚಿತ್ರವನ್ನು ನಿರ್ದೇಶಿಸ ಬೇಕು ಎನ್ನುವ ಆಶಯ ಹೊಂದಿರುವುದಾಗಿ ತಿಳಿಸಿದ್ದಾರೆ. 
 
ನಾನು ಹಿಂದಿ ಸಿನಿಮಾಗಳನ್ನು ಹೆಚ್ಚು ವೀಕ್ಷಿಸುವುದಿಲ್ಲ, ಆದರೆ ರಾಜ್ ಕುಮಾರ್ ಹಿರಾನಿ ಅಮೀರ್ ಖಾನ್ ಅವರ ಚಿತ್ರಗಳನ್ನು ಮಾತ್ರ ತಪ್ಪದೆ ವೀಕ್ಷಿಸುತ್ತೇನೆ. ಭವಿಷ್ಯದಲ್ಲಿ ಅಮೀರ್ ಖಾನ್ ಜೊತೆ ಒಂದು ಸಿನಿಮ ಮಾಡುವ  ಉದ್ದೇಶ ಇದೆ . ನನ್ನ ಆ  ಆಸೆಯನ್ನು ಅಮೀರ್ ಸಮ್ಮತಿಸುತ್ತಾರೆ ಎಂದು ಆಶಿಸುತ್ತೇನೆ ಎಂಬುದಾಗಿ  ಹೇಳಿದ್ದಾರೆ. ರಾಜಮೌಲಿಯ ಈ ಆಶಯ ಆಮೀರ್ ಸಮ್ಮತಿಸುವ ಎಲ್ಲ ಸಾಧ್ಯತೆಗಳಿವೆ, ಏಕೆಂದರೆ ಈಗಾಗಲೇ ಇವರ ನಿರ್ದೇಶನದ ವಿಕ್ರಮಾರ್ಕುಡು, ಮರ್ಯಾದ ರಾಮಣ್ಣ ಸಿನಿಮಾಗಳು ಹಿಂದಿಯಲ್ಲಿ ರೀಮೇಕ್ ಆಗಿದ್ದು, ಅದು ಅತ್ಯುತ್ತಮ ಗೆಲುವು ಕಂಡಿದೆ. ಅಲ್ಲದೆ ಅವರ ಮಕ್ಕಿ ಸಹಿತ ಗೆದ್ದಿದೆ.. ಸೊ ಅಮೀರ್ ಮತ್ತು   ಮೌಳಿ ಒಟ್ಟಾಗಿ ಕೆಲಸ ಮಾಡುವುದು ಕಷ್ಟದ ಸಂಗತಿಯಲ್ಲ !!

ವೆಬ್ದುನಿಯಾವನ್ನು ಓದಿ