ಮಲೆಯಾಳಂ ಖ್ಯಾತ ನಿರ್ದೇಶಕ ರಾಜೇಶ ಪಿಳ್ಳೈ ನಿಧನ

ಶನಿವಾರ, 27 ಫೆಬ್ರವರಿ 2016 (19:50 IST)
ಮಲೆಯಾಳಂನ ಖಾತ್ಯ ನಿರ್ದೇಶಕ ರಾಜೇಶ್ ಪಿಳ್ಳೈ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ ಪಿಳ್ಳೈ ಇವತ್ತು  ಪಿನಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 

41 ವರ್ಷದ ರಾಜೇಶ್ ಪಿಳ್ಳೈ ಮಲೆಯಾಳಂನ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇತ್ತೀಚ್ಚೆಗೆ ಅವರು ನಿರ್ದೇಶಿಸಿದ್ದ ಮಲೆಯಾಳಂನ 'ಟ್ರಾಫಿಕ್' ಚಿತ್ರ ಖ್ಯಾತಿ ತಂದು ಕೊಟ್ಟಿತ್ತು. ಅವರ ಮತ್ತೊಂದು ಮಲೆಯಾಳಂ ಚಿತ್ರ 'ವೆತ್ತಾಹ್ ' ಬಿಡುಗಡೆಗೊಂಡಿತ್ತು.
 
ಫೆ.25ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರು. ತದ ನಂತರ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು ಅಂತ ಹೇಳಲಾಗಿದೆ. ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಲೀವರ್ ಕಸಿ ಚಿಕಿತ್ಸೆ ಪಡೆಯಬೇಕಿತ್ತು. 
 
ರಾಜೇಶ್ ಪಿಳ್ಳೈ ನಿರ್ದೇಶನದ ಚಿತ್ರಗಳಲ್ಲಿ ಹಲವು ನಟರು ಇವರ ಜೊತೆ ಕೆಲಸ ಮಾಡಿದ್ದರು. ಮಲೆಯಾಳಂನ 'ವೆತ್ತಾಹ್ ' ಚಿತ್ರ ನಿರ್ದೇಶನದ ವೇಳೆ ಅವರು ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಅದಾದ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ