ಸೆನ್ಸೇಷನಲ್ ಐ ನಿದೇಶಕ ಶಂಕರ್ - ವಿಕ್ರಮ್ ಜೋಡಿಯ ಸಾಹಸ ..

ಬುಧವಾರ, 27 ಆಗಸ್ಟ್ 2014 (11:03 IST)
ಕೆಲವು ಚಿತ್ರಗಳು ಇತಿಹಾಸದಲ್ಲಿ ಅತ್ಯುತ್ತಮ ಸ್ಥಾನ ಪಡೆಯಲು ಪ್ರಯತ್ನ ಪಡುತ್ತದೆ. ಆ ಪಟ್ಟಿಯಲ್ಲಿ ನಿರ್ದೇಶಕ ಶಂಕರ್ ಅವರ ಹೊಚ್ಚ ಹೊಸ ಚಿತ್ರ ಸೇರ್ಪಡೆ ಆಗುವ ಸಿದ್ಧತೆಯಲ್ಲಿದೆ. ಅದಕ್ಕೆ ಪೂರಕವಾದ ಕೆಲಸಗಳನ್ನು ಮಾಡಿದ್ದಾರೆ ಶಂಕರ್. ಈ ರೀತಿಯ ಸಾಹಸ ಭಾರತೀಯ ಸಿನಿ ಇತಿಹಾಸದಲ್ಲೇ ಮೊಟ್ಟ ಮೊದಲನೆಯದಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ ಕಾಲಿವುಡ್  ಮಾಧ್ಯಮದವರು.ವಿಕ್ರಮ್ ಹೀರೋ ಆಗಿರುವ ಹಾಗೂ ಶಂಕರ್ ನಿರ್ದೇಶನದಲ್ಲಿ ಸಿದ್ಧ ಆಗಿರುವ ಚಿತ್ರ ಐ ಚಿತ್ರ ದೀಪಾವಳಿ ದಿನದಂದು ಬಿಡುಗಡೆ ಆಗುತ್ತಿದೆ. 


ಟಾಲಿವುಡ್ ನಲ್ಲಿ ಈ ಚಿತ್ರ  ಮನೋಹರಡು ಎನ್ನುವ ಹೆಸರಿನಿಂದ ಪ್ರದರ್ಶಿತವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅನೇಕ ದಾಖಲೆಗಳನ್ನು  ಹೊಂದುವುದಕ್ಕೆ ನಿರ್ದೇಶಕ ಶಂಕರ್ ಆದ್ಯತೆ ನೀಡಿದ್ದಾರೆ. ಈಗ ಪೋಸ್ಟ್ ಪ್ರೊಡಕ್ಷನ್ ವಿಷಯದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಅಕೊಬರ್ 22  ರಂದು ಬಿಡುಗಡೆ ಆಗುತ್ತದೆ ಎನ್ನುವ ಸಂಗತಿ ಈಗ ಕಾಲಿವುಡ್ ನಿಂದ ಹೊರ ಬಂದಿದೆ. 
 
180  ಕೋಟಿಯಷ್ಟು ಭಾರಿ ಬಜೆಟ್ ನಿಂದ ನಿರ್ಮಾಣ ಆಗಿರುವ ಚಿತ್ರವೂ ವಿಶ್ವವಿಡಿ ಸುಮಾರು 15ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುವುದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ ಶಂಕರ್. ಟಾಪ್ ಬಾಲಿವುಡ್ ಹೀರೋಗಳು ಸಹಿತ ಈವರೆಗೂ ಮೂರು ಸಾವಿರದಿಂದ 5 ಸಾವಿರಕ್ಕಿಂತ ಹೆಚ್ಚಿನ ಥಿಯೇಟರ್ ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಿಲ್ಲ, ಆದರೆ ದಕ್ಷಿಣ ಭಾರತ ಸಿನಿಮಾ  15  ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿರುವ ಸಂಗತಿ ಸೆನ್ಸೇಷನಲ್ ಆಗಿದೆ.   
 
ಹೈ ಟೆಕ್ನಾಲಜಿ ಯಿಂದ ನಿರ್ಮಿಸಿರುವ ಈ ಚಿತ್ರವನ್ನು ತೆಲುಗು, ಹಿಂದಿ, ಮಲೆಯಾಳಂ  ನಂತಹ ಭಾರತೀಯ ಭಾಷೆಗಳಲ್ಲದೆ,ಚೈನಾ, ತೈವಾನ್, ಮುಂತಾದ 25  ವಿದೇಶಿ ಭಾಷೆಗಳಲ್ಲೂ ಸಹಿತ ಈ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆಯಂತೆ..
 
ಆ ಸಿನಿಮಾದಲ್ಲಿ ಕೆಲವು ಸನ್ನಿವೇಶಗಳಲ್ಲಿ ವಿಕ್ರಮ್ ಭಯಂಕರವಾದ ಮೃಗ ರೂಪದಲ್ಲಿ ಕಂಡು ಬರಲೆಂದು 130 ಕೆ.ಜಿ ಗಳಷ್ಟು ತೂಕ ಹೊಂದಿದ್ದು ಆ ಚಿತ್ರ ಪ್ರತ್ಯೇಕತೆಗಳಲ್ಲಿ ಒಂದಾಗಿದೆ. ನಾವ್ ಯಾರ್ಗೂ ಕಮ್ಮಿ ಇಲ್ಲ ಎಂದು ದಕ್ಷಿಣ ಭಾರತದ ಚಿತ್ರಮಂದಿ ಪ್ರಪಂಚಕ್ಕೆ ಸಾಬೀತು ಮಾಡ್ತಾ ಇದ್ದಾರೆ ಈ ಮೂಲಕ !

ವೆಬ್ದುನಿಯಾವನ್ನು ಓದಿ