ಅಬ್ಬಾ! ಇಷ್ಟೊಂದು ದುಬಾರಿ ಬೆಲೆಯ ಟೀ ಶರ್ಟ್ ಹಾಗೂ ಶೂ ಧರಿಸಿದ್ರಾ ನಟಿ ಕರೀನಾ ಕಪೂರ್

ಸೋಮವಾರ, 11 ಜೂನ್ 2018 (12:58 IST)
ಮುಂಬೈ : ಸಿನಿಮಾ ತಾರೆಯರು ಏನೇ ಧರಿಸಿದರೂ, ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಅದೇರೀತಿ ಇದೀಗ ಬಾರೀ ಸುದ್ದಿಯಾಗಿರುವುದು ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಧರಿಸಿದ್ದ ಟೀ ಶರ್ಟ್ ಹಾಗೂ ಶೂ.

ನಟಿ ಕರೀನಾ ಕಪೂರ್ ಅವರು ತಮ್ಮ ರಜಾ ದಿನಗಳನ್ನು ಕಳೆಯಲು ಮಗ ತೈಮೂರ್ ಜೊತೆ ಲಂಡನ್ ಗೆ ತೆರಳಿದ್ದಾರೆ. ಲಂಡನ್ ಗೆ ತೆರಳುವ ಮೊದಲು  ಕರೀನಾ ಅವರು  ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಅವರು ಧರಿಸಿದ್ದ ಬಿಳಿ ಟೀ ಶರ್ಟ್ ಹಾಗೂ ಶೂ ಈಗ ಸಖತ್ ಸುದ್ದಿಯಲ್ಲಿದೆ.

 

ಕರೀನಾ Gucci ನ ಆರೆಂಜ್ ಪ್ರಿಂಟ್ ಇದ್ದ ಬಿಳಿ ಟೀ ಶರ್ಟ್ ಹಾಗೂ ಬಿಳಿ ಬಣ್ಣದ ಶೂ ಧರಿಸಿದ್ದರು. ಅವರು ಧರಿಸಿದ್ದ ಟಿ ಶರ್ಟ್ ಆನ್ಲೈನ್ ಬೆಲೆ 56 ಸಾವಿರ ರೂಪಾಯಿ ಹಾಗೂ ಶೂ ಬೆಲೆ ಆನ್ಲೈನ್ ನಲ್ಲಿ 40 ಸಾವಿರ ರೂಪಾಯಿಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ