ಗಂಡು ಮಗುವಿನ ತಾಯಿಯಾದ ಲವ್ ಮಾಕ್ಟೇಲ್ 2 ಸಿನಿಮಾದ ಸುಶ್ಮಿತಾ ಗೌಡ

Sampriya

ಮಂಗಳವಾರ, 23 ಸೆಪ್ಟಂಬರ್ 2025 (18:43 IST)
Photo Credit X
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ʻಲವ್‌ ಮಾಕ್ಟೇಲ್‌ 2’ ಸಿನಿಮಾ ಖ್ಯಾತಿಯ ನಟಿ ಸುಶ್ಮಿತಾ ಗೌಡ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಗುಡ್‌ನ್ಯೂಸ್ ಅನ್ನು ನಟಿಯೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಈಚೆಗೆ ಅದ್ದೂರಿಯಾಗಿ ಸುಶ್ಮಿತಾ ಅವರ ಸೀಮಂತ ಶಾಸ್ತ್ರ ನಡೆಯಿತು. ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. 

ಇದೀಗ, ನಟಿ ಸುಶ್ಮಿತಾ ಗೌಡ ಹಾಗೂ ಅಶ್ವಿನ್‌ ದಂಪತಿ ಗಂಡು ಮಗು ಜನಿಸಿರುವುದರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಲವ್‌ ಮಾಕ್ಟೇಲ್ 2 ಸಿನಿಮಾದಲ್ಲಿ ಜಂಕಿ ಪಾತ್ರದಲ್ಲಿ ಗಮನ ಸೆಳೆದಿದ್ದ ನಟಿ, ಬಳಿಕ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕನೇ ಹೆಚ್ಚು ಗಮನ ಸೆಳೆದಿದ್ದರು. 

ಈಗಾಲೂ ಇಂಟ್ರೆಸ್ಟಿಂಗ್ ಕಾಂಟೆಂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

2022ರಲ್ಲಿ ಅಶ್ವಿನ್ ಮತ್ತು ಸುಶ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೆಪ್ಟೆಂಬರ್‌ 16ರಂದು ಗಂಡು ಮಗುವಿಗೆ ಜನ್ಮ ನೀಡಿದ ಸುಶ್ಮಿತಾ ಗೌಡ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪುಟ್ಟ ಕೃಷ್ಣನ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಪುಟ್ಟ ಪಾದಗಳು, ಅಂತ್ಯವಿಲ್ಲದ ಆಶೀರ್ವಾದಗಳು, ನಮ್ಮ ಪುಟ್ಟ ಕೃಷ್ಣ ಇಲ್ಲಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ