ನಾಗರಹಾವು ಚಿತ್ರದಲ್ಲಿ 9 ನಿಮಿಷ ಕಾಣ್ತಾರೆ ವಿಷ್ಣುವರ್ಧನ?

ಗುರುವಾರ, 29 ಸೆಪ್ಟಂಬರ್ 2016 (09:40 IST)
ಬಹುನಿರೀಕ್ಷಿತ 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ ಅವರು ಮತ್ತೆ ತೆರೆ ಮೇಲೆ ನೋಡೋ ಅವಕಾಶಕ್ಕಾಗಿ ಅಭಿಮಾನಿಗಳು ಒಂದು ಕಡೆಯಿಂದ ಕಾತುರರಾಗಿದ್ದಾರೆ. ಆದ್ರೆ ಸಿನಿಮಾದಲ್ಲಿ ವಿಷ್ಣು ಸರ್ ಕೇವಲ 9 ನಿಮಿಷಗಳವರೆಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರಂತೆ.

ಮಹಾಕಾವ್ಯದ ಕಥೆ ಮತ್ತು ನಿರ್ದೇಶನ ಮಾಡಿರುವ ತೆಲುಗಿನ ಪ್ರಸಿದ್ಧ ಚಲಚಿತ್ರ ಅರುಂಧತಿ (2009) ಮತ್ತು ಅಂಜಲಿ(2004) ಸಿನಿಮಾಗಳಿಂದ ಪ್ರಸಿದ್ಧರಾಗಿರುವ  ಕೋಡಿ ರಾಮಕೃಷ್ಣ ಅವರದು.
 
ಮುಕುಟ ಆರ್ಟ್ಸ್ ಸಂಸ್ಧೆ ನಾಗರಹಾವು ಚಿತ್ರಕ್ಕೆ ಗ್ರಾಫಿಕ್ಸ್ ಮಾಡಿದೆ. ಅಂದಹಾಗೇ ಇಡೀ ಚಿತ್ರದಲ್ಲಿ ಡಾ.ವಿಷ್ಣುವರ್ಧನ ಪಾತ್ರ ಕೇವಲ 9 ನಿಮಿಷಗಳ ವರೆಗೆ ಇರಲಿದೆ. 
 
ದೂದ್‌ಪೇಡಾ ದಿಗಂತ್ ಮತ್ತು ರಮ್ಯಾ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಸಜಿದ್ ಖುರೇಷಿ, ಸೊಹೈಲ್, ಧವಲ್ ಗದಾ ಮತ್ತು ಜಯಂತಿ ಗದಾ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 
 
ವಿಶೇಷ  ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಈ ಸಿನಿಮಾದಲ್ಲಿ ದಿವಂಗತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ನೋಡುವ ಅವಕಾಶವನ್ನು ಒದಗಿಸಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶನ ಮಾಡಿರುವ ತೆಲುಗಿನ ಪ್ರಸಿದ್ಧ ಚಲಚಿತ್ರ ಅರುಂಧತಿ (2009) ಮತ್ತು ಅಂಜಲಿ(2004) ಸಿನಿಮಾಗಳಿಂದ ಪ್ರಸಿದ್ಧರಾಗಿರುವ  ಕೋಡಿ ರಾಮಕೃಷ್ಣ ಅವರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ