ವಿಶ್ವದಲ್ಲೇ ಅತ್ಯಂತ ‘ಸೆಕ್ಸಿಯೆಸ್ಟ್ ಏಶಿಯನ್ ವುಮೆನ್’ ಪಟ್ಟ ಯಾರಿಗೆ ಸಿಕ್ಕಿದೆ ಗೊತ್ತಾ...?

ಶುಕ್ರವಾರ, 29 ಡಿಸೆಂಬರ್ 2017 (13:03 IST)
ಮುಂಬೈ: ಬಾಲಿವುಡ್ ನ ನಟಿ ಪ್ರಿಯಾಂಕ ಚೋಪ್ರಾ ಅವರು ವಿಶ್ವದಲ್ಲೇ ಅತ್ಯಂತ ‘ಸೆಕ್ಸಿಯೆಸ್ಟ್ ಏಶಿಯನ್ ವುಮನ್’ ಎಂದು ಕರೆಯಿಸಿಕೊಂಡಿದ್ದಾರೆ. ಇವರು ವಾರ್ಷಿಕ ವಾರ್ತಾ ಪತ್ರಿಕೆ  ಈಸ್ಟರ್ನ್ ಐ ಪ್ರಕಟಿಸಿದ 2017ರ ಸೆಕ್ಸಿಯೆಸ್ಟ್ ಏಶಿಯನ್ ವುಮನ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

  
ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಡ್ರೆಸ್ಸಿಂಗ್, ಮೈಕಟ್ಟು, ಬುದ್ಧಿವಂತಿಕೆಯಿಂದ ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದು ಈ ಸ್ಥಾನ ಪಡೆದುಕೊಳ್ಳಲು ಕಾರಣವಾಗಿದೆ.

 
ವಾರ್ಷಿಕ ವಾರ್ತಾ ಪತ್ರಿಕೆ  ಈಸ್ಟರ್ನ್ ಐ ಪ್ರಕಟಿಸಿದ 2017ರ ಸೆಕ್ಸಿಯೆಸ್ಟ್ ಏಶಿಯನ್ ವುಮನ್ ಪಟ್ಟಿಯಲ್ಲಿ ಜನಪ್ರಿಯ ಟೆಲಿವಿಷನ್ ನ ನಟಿ ನಿಯಾಶರ್ಮಾ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೆ 3ನೇ ಸ್ಥಾನ ಬಾಲಿವುಡ್ ನ ನಟಿ ದೀಪಿಕಾ ಪಡುಕೋಣೆ ಪಡೆದುಕೊಂಡರೆ, 4ನೇ ಸ್ಥಾನ ಇನ್ನೊಬ್ಬ ಬಾಲಿವುಡ್ ನ ನಟಿ ಅಲಿಯಾಭಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ