ಪವರ್ ಸ್ಟಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರದ ಆಡಿಯೋ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಬಿಡುಗಡೆ ಮಾಡಲಾಯ್ತು. ಕರ್ನಾಟಕ ರತ್ನ, ತ್ರಿವಿಧ ದಾಸೋಯಿ ಶ್ರೀ ಶಿವಕುಮಾರ್ ಸ್ವಾಮೀಜಿ ಆಗಮಿಸುತ್ತಿದ್ದಂತೆ ಸಾಮೂಹಿಕವಾಗಿ ಪಾದಪೂಜೆ ನೆರವೇರಿತು. ಬಳಿಕ ಶ್ರೀಗಳ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಪುನೀತ್, ಇದು ನಡೆದಾಡುವ ದೇವರಿರುವ ಮಠ.. ನಾನು 6 ವರ್ಷದ ಚಿಕ್ಕವನಿರುವಾಗ ನಮ್ಮ ತಂದೆ ಮಠಕ್ಕೆ ಕರೆತಂದಿದ್ದರು ಹಾಗೂ ಆಶೀವಾರ್ದ ಮಾಡಿಸಿದ್ದರು. ಅಂದಿನಿಂದಲೂ ಮಠದ ಮೇಲೆ ಅಪಾರ ಭಕ್ತಿ ಇದೆ ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಟ ಅಂಬರೀಷ್, ನಟಿ ಭಾರತಿ ವಿಷ್ಣುವರ್ಧನ ಅವರನ್ನು ಗೌರವಿಸಲಾಯ್ತು. ನಟ ರವಿಶಂಕರ್, ನಟಿ ಭಾರತಿ ವಿಷ್ಣುವರ್ಧನ, ನಿರ್ದೇಶಕ ಯೋಗರಾಜ್ ಭಟ್, ದೊಡ್ಮನೆ ಚಿತ್ರದ ನಿರ್ದೇಶಕ ಸೂರಿ ಉಪಸ್ಥಿತರಿದ್ದರು.