Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

Krishnaveni K

ಗುರುವಾರ, 1 ಮೇ 2025 (21:09 IST)
Photo Credit: X
ಬೆಂಗಳೂರು: ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧ ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು.. ಹೀಗಂತ ನಟಿ ರಮ್ಯಾ ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಜೊತೆ ಯುದ್ಧವಾಗಿಯೇ ಬಿಡುತ್ತದೆ ಎನ್ನುವ ಪರಿಸ್ಥಿತಿಯಿದೆ. ಇಂದು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದೆ, ನಟಿ ರಮ್ಯಾರನ್ನು ಮಾಧ್ಯಗಳು ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಅವರು ‘ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಾಗಿಲ್ಲ. ಯುದ್ಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಯುದ್ಧ ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು’ ಎಂದಿದ್ದಾರೆ.

ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಮಾಡೋದರಿಂದ ಯಾರೂ ಉದ್ದಾರವಾಗಲ್ಲ. ನಾವು ನಾಯಕರನ್ನು ನಮ್ಮ ರಕ್ಷಣೆ ಮಾಡಲಿ ಎಂದು ಆಯ್ಕೆ ಮಾಡುತ್ತೇವೆ. ಇನ್ನೊಂದು ಬಾರಿ ಈ ರೀತಿ ಆಗದಂತೆ ನಮ್ಮ ಸೆಕ್ಯುರಿಟಿ ಟೈಟ್ ಮಾಡಬೇಕು. ಈ ಬಾರಿ ಹೇಗೆ ದಾಳಿಯಾಯಿತು, ಯಾಕೆ ಭದ್ರತೆ ಫೈಲ್ ಆಯ್ತು ಎಂದು ನೋಡಬೇಕು’ ಎಂದಿದ್ದಾರೆ. ಆದರೆ ರಮ್ಯಾ ಹೇಳಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಟೀಕೆ ಮಾಡಿದ್ದಾರೆ. ಈ ಹಿಂದೆ ರಮ್ಯಾ ಪಾಕಿಸ್ತಾನ ಸ್ವರ್ಗ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೊಮ್ಮೆ ನಮ್ಮ ಸೈನಿಕರೇ ಸಾಯೋದು ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ