ಪತ್ನಿ ಜೆನೆಲಿಯಾ ಜತೆಗೆ ನಟಿಸಿವುದು ಕನಸಾಗಿತ್ತು :ರಿತೇಶ್ ದೇಶಮುಖ್

ಶನಿವಾರ, 9 ಜುಲೈ 2016 (13:11 IST)
ಮರಾಠಿ ಚಿತ್ರದಲ್ಲಿ 'ನನ್ನ ಪತ್ನಿ ಜೆನೆಲಿಯಾ ಜತೆಗೆ ನಟಿಸುವುದು ನನ್ನ ಕನಸಾಗಿತ್ತು ಎಂದು ನಟ ರಿತೇಶ್ ದೇಶಮುಖ್ ತಿಳಿಸಿದ್ದಾರೆ. ಜೆನೆಲಿಯಾ ನನ್ನ  ಫೇವರಿಟ್ ಕೋ-ಸ್ಟಾರ್ ಎಂದಿರುವ ಅವರು,  ಜನೆಲಿಯಾ ಜತೆಗೆ ಸ್ಕ್ರೀನ್ ಶೇರ್ ಮಾಡಿದ್ದು ತುಂಬಾ ಖುಷಿ ನೀಡಿದೆ ಎಂದು ತಿಳಿಸಿದ್ದಾರೆ. ಇಚೆಗಷ್ಟೇ ಮರಾಠಿ ಚಿತ್ರದಲ್ಲಿ ರಿತೇಶ್ ಜೆನೆಲಿಯಾ ಜತೆಗೆ ನಟಿಸಿದ್ದರು.

 
ಮತ್ತೆ ತೆರೆ ಮೇಲೆ ಜೆನಿಲಿಯಾ ಹಾಗೂ ನಿಮ್ಮನ್ನು ಪ್ರೇಕ್ಷಕರು ನೋಡಬಯಸುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆನೆಲಿಯಾ ನನ್ನ ಫೇವರಿಟ್ ಕೋ-ಸ್ಟಾರ್, ಅವರ ಜತೆಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗಲಿ ಎಂಬುದು ನನ್ನ ಆಸೆಯಾಗಿದೆ ಜೆನೆಲಿಯಾ ಜತೆಗೆ ಕೆಲಸ ಮಾಡಿರುವುದರ ಬಗ್ಗೆ ಎಂಜಾಯ್ ಮಾಡಿದ್ದೇನೆ ಎಂದು ರಿತೇಶ್ ದೇಶಮುಖ್ ತಿಳಿಸಿದ್ದಾರೆ. 
 
ಮರಾಠಿ ಚಿತ್ರದಲ್ಲೇ ನನ್ನ ಜತೆಗೆ ಜೆನೆಲಿಯಾ ಕೆಲಸ ಮಾಡಬೇಕು... ಆಕೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾಳೆ. ಆದ್ದರಿಂದ ಆಕೆ ಮರಾಠಿ ಚಿತ್ರಗಳಲ್ಲಿ ನನ್ನ ಜತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಬಗ್ಗೆ ಕನಸಿದೆ ಎಂದು ರಿತೇಶ್ ತಿಳಿಸಿದ್ದಾರೆ. 
 
ಮರಾಠಿ ಚಿತ್ರರಂಗಕ್ಕೆ ಧನ್ಯವಾದ ತಿಳಿಸುತ್ತೇನೆ. ಅವರೆಲ್ಲಾ ತುಂಬಾ ಚೆನ್ನಾಗಿ ಕಟೆಂಟ್ ಹೊಂದಿದ್ದಾರೆ. ನನ್ನ ಹತ್ತಿರ ಇದೀಗ ಮೂರು ಮರಾಠಿ ಪ್ರೊಜೆಕ್ಟ್‌ಗಳಿವೆ. ನಾನು ಒಂದು ಪ್ರೋಜೆಕ್ಟ್‌ನ್ನು ನಿರ್ಮಾಣ ಮಾಡುತ್ತಿದ್ದೇನೆ. ಈ ಕುರಿತು ಥ್ರೀಲ್ ಆಗಿದ್ದೇನೆ ಎಂದು ರಿತೇಶ್ ತಿಳಿಸಿದ್ದಾರೆ. 2012ರಲ್ಲಿ ಜೆನೆಲಿಯಾ ಹಾಗೂ ರಿತೇಶ್ ಮದುವೆಯಾಗಿದ್ದರು.. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ