ಬಾಲಿವುಡ್ ಚಿತ್ರರಸಿಕರಿಗೆ ಇಮ್ರಾನ್ ಹಸ್ಮಿ ಹೆಸರು ಗೊತ್ತೇ ಇರುತ್ತೆ. ರೊಮ್ಯಾಂಟಿಕ್ ಸೀನ್‌ಗಳಲ್ಲಿ ತನ್ನದೇ ಛಾಪು ಮೂಡಿಸಿದ ನಟ. ಅದರಲ್ಲೂ ಕಿಸ್ಸಿಂಗ್ ಬಾಯ್ ಎಂದೇ ಗುರುತಿಸಿಕೊಂಡವನು. ಈ ಹೀರೋಗೆ ಐದು ವರ್ಷದ ಪುತ್ರನಿದ್ದು, ಪಾಪ ಆ ಮಗು ಕಿಡ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದೆ.
2014ರಲ್ಲಿ ಪುತ್ರನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಸಾಕಷ್ಟು ಒದ್ದಾಡಿದೆವು. ನಮಗೇ ಈ ರೀತಿ ಯಾಕಾಯಿತು ಎಂದು ನೋವನುಭವಿಸಿದೆವು. ಈಗ ಆ ನೋವಿನಿಂದ ಹೊರಬಂದು ಮಗನಿಗೆ ಚಿಕಿತ್ಸೆ ಮಾಡಿಸುತ್ತಿದ್ದೇವೆಂದು, ಅದರಿಂದ ಪೂರ್ಣ ಪ್ರಮಾಣದಲ್ಲಿ ವಾಸಿಯಾಗದಿದ್ದರೂ ಇನ್ನು ನಾಲ್ಕು ವರ್ಷ ಬದುಕಬಹುದಷ್ಟೇ. ತನ್ನ ಮಗನನ್ನು ಬದುಕಿಸಿಕೊಳ್ಳಲು ಎಷ್ಟೇ ಕಷ್ಟ ಆದರೂ ಭರಿಸುತ್ತೇನೆ ಎಂದಿದ್ದಾರೆ.