117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ
117ಫೀಟ್ ಎತ್ತರದಿಂದ ಬಂಗೀ ಜಂಪಿಗ್ ಮಾಡಿದ್ದು, ನನ್ನ ಗಂಡನಿಂದಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಟಿ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ನಟಿ ಅಮೂಲ್ಯ, ನಿವೇದಿತಾ ಗೌಡ, ವಿಜಯ್ ಸೂರ್ಯ, ಐಶ್ವರ್ಯಾ ಸಾಲಿಮಠ ಸೇರಿದಂತೆ ಕಿರುತೆರೆಯ ತಾರೆಯರು ಆಗಮಿಸಿ ಹೊಸ ಜೀವನಕ್ಕೆ ನಾಂದಿ ಹಾಡಿದ ವೈಷ್ಣವಿ ಗೌಡ - ಅನುಕೂಲ್ ಮಿಶ್ರಾಗೆ ಶುಭ ಹಾರೈಸಿದರು.