ಮಾಡೆಲಿಂಗ್ ಕ್ಷೇತ್ರವಲ್ಲ, ಮಿಸ್ ಇಂಡಿಯಾ ಆಗಿಯೂ ಕಿರೀಟ ಮುಡಿಗೇರಿಸಿಕೊಂಡವರು ಇಶಾ ಗುಪ್ತಾ.. ಇದೀಗ ಟಾಲಿವುಡ್‌ನಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ನಟ ನಿಖಿಲ್ ಜತೆಗೆ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಇಶಾ ಸ್ಪೆಷಲೋ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಪೊಲೀಸ್ ಆಫಿಸರ್ ರೋಲ್‌ನಲ್ಲಿ ಇಶಾ ಗುಪ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಇಶಾ, ಟಾಲಿವುಡ್ ಚಿತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿತ್ತು. ಕಥೆ ಕೇಳಿದ ಇಶಾ ಚಿತ್ರಕ್ಕಾಗಿ ನಟಿಸುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ರು.
ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ದೇವನ್ ಭೋಜಾನಿ, ವಿದ್ಯತ್ ಜಾಮ್‌ವಾಲ್ ಎದುರು ಖಳನಾಯಕಿಯಾಗುತ್ತಿದ್ದಾರೆ ಇಶಾ.. 2012ರಲ್ಲಿ 'ಜನ್ನತ್-2',' ರುಸ್ತುಮ್, 'ಹೇರಾ ಫೇರಿ-3' ಹಾಗೂ 'ರಂಗೂನ್' ಚಿತ್ರಗಳಲ್ಲೂ ಇಶಾ ಬ್ಯೂಸಿ ಇರುವ ನಟಿ...
ಅಲ್ಲದೇ ಇಶಾ ಕೇನಲ ನಟನೆಗೆ ಮಾತ್ರ ಸೀಮಿತವಾಗಿಲ್ಲ.. ತಮ್ಮ ಸಮಾಜಮುಖಿ ಕೆಲಸಗಳಲ್ಲಿ ಗಮನ ಸೆಳೆದಿದ್ದರು. ಈ ಹಿಂದೆ ಪ್ರಾಣಿ ಹಿಂಸೆ ವಿರುದ್ಧ ಧ್ವನಿ ಎತ್ತಿದ ಅವರು, ಬರಪೀಡಿತ ಮಹಾರಾಷ್ಟ್ರದ ಜಿಲ್ಲೆಗಳಿಗೆ ತಮ್ಮದೇ ಆದ ರೀತಿಯಲ್ಲಿ ನೆರವಿನ ಹಸ್ತ ಚಾಚಿದವರು.