ರಾತ್ರೋರಾತ್ರಿ ವಿಷ್ಣು ಸ್ಮಾರಕ ನೆಲಸಮ, ಹಬ್ಬದ ದಿನವೇ ಕಣ್ಣೀರು ಹಾಕುತ್ತಿರುವ ವಿಷ್ಣುವರ್ಧನ್ ಫ್ಯಾನ್ಸ್
35 ವರ್ಷಗಳ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಗೈದು, 200ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಾಸಿ, ಕನ್ನಡಿಗರ ಮನಸ್ಸಲ್ಲಿ ಸಾಹಸಸಿಂಹನಾಗಿ ಮೆರೆದ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು.
ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಆದ್ರೆ ಹೈಕೋರ್ಟ್ ಸೂಚನೆ ಮೇರೆ ರಾತ್ರೋರಾತ್ರಿ ಸಮಾಧಿಯನ್ನ ತೆರವುಗೊಳಿಸಲಾಗಿದೆ. ಇದು ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.