ತಂದೆಯನ್ನೇ ಹೋಲುವ ಶಾರುಖ್ ಪುತ್ರ ಆರ್ಯನ್

ಸೋಮವಾರ, 16 ಮೇ 2016 (10:28 IST)
ಶಾರುಖ್ ಖಾನ್ ತಮ್ಮ ಬಗ್ಗೆ ಎಷ್ಟು ಮಾತನಾಡುತ್ತಾರೋ ಗೊತ್ತಿಲ್ಲ ಆದ್ರೆ ಆಗಾಗ್ಗೆ ತನ್ನ ಮಕ್ಕಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಮಕ್ಕಳೆಂದ್ರೆ ಶಾರುಖ್ ಅವರಿಗೆ ಅತೀವ ಪ್ರೀತಿ. ಕೆಲ ದಿನಗಳ ಹಿಂದಷ್ಟೇ ಶಾರುಖ್ ಖಾನ್ ಅವರು ನನಗೆ ನನ್ನ ಮಕ್ಕಳ ಕನಸುಗಳನ್ನು ನನಸು ಮಾಡೋದು ತುಂಬಾ ಇಷ್ಟ ಅಂತಾ ಹೇಳಿದ್ದರು. ಇದೀಗ ಶಾರುಖ್ ಖಾನ್ ಅವರ ಮಗ ಸಾಮಾಜಿಕ ಜಾಲತಾಣದಲ್ಲಿ ಹಾಕಿರೋ ಫೋಟೋ ಒಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
 ಅಯ್ಯೋ! ಈ ಫೋಟೋದಲ್ಲಿ ಅಂತಹದ್ದು ಏನಿದೆಯಪ್ಪಾ ಅಂತಾ ಕನ್ಫ್ಯೂಸ್ ಆಗ್ಬೇಡಿ. ಶಾರುಖ್ ಖಾನ್ ಪುತ್ರ ಆರ್ಯನ್ ತನ್ನ ಫೋಟೋ ಒಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾನೆ. ಇದರಲ್ಲಿ ಆರ್ಯನ್ ಥೇಟ್ ಅಪ್ಪನ ರೀತಿಯೇ ಕಾಣುತ್ತಿದ್ದಾನೆ.
 
ಅಂದ್ಹಾಗೆ ತನ್ನ ಸೆಲ್ಫಿಯನ್ನು ಆರ್ಯನ್ ಇನ್ಸ್ ಟ್ರಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಅದರಲ್ಲಿ ಅವನ ಹೇರ್ ಸ್ಟೈಲ್ ಎಲ್ಲಾ ನೋಡಿದ್ರೆ ಅವನು ಶಾರುಖ್ ಖಾನ್ ಅವರನ್ನೇ ಹೋಲುತ್ತಿದ್ದಾನಂತೆ. 
 
ಫೋಟೋ ನೋಡಿದವರೆಲ್ಲಾ ಇದೇ ರೀತಿ ಮಾತನಾಡುತ್ತಿದ್ದಾರಂತೆ. ಅಲ್ಲದೇ ಆರ್ಯನ್ ದೊಡ್ಡವನಾದ ಮೇಲಂತೂ ಶಾರುಖ್ ಖಾನ್ ಅವರ ಥರಾನೇ ಆಗ್ತಾನೆ ಅಂತಾ ಬಾಲಿವುಡ್ ಮಂದಿ ಮಾತನಾಡುತ್ತಿದ್ದಾರೆ.
 
ಇನ್ನು ಶಾರುಖ್ ಖಾನ್ ಪುತ್ರ ಆರ್ಯನ್ ಬಾಲಿವುಡ್ ಗೆ ಎಂಟ್ರಿ ಕೊಡ್ತಾರೆ ಅನ್ನೋಮಾತುಗಳು ಬಾಲಿವುಡ್ ಅಂಗಳದಲ್ಲಿ ಬಹು ದಿನಗಳಿಂದ ಕೇಳಿ ಬರುತ್ತಿತ್ತು. ಆದ್ರೆ ಶಾರುಖ್ ಆಗ್ಲಿ ಗೌರಿ ಖಾನ್ ಆಗ್ಲಿ ಈ ಬಗ್ಗೆ ಇದುವೆರೆಗೂ ಏನು ಬಾಯ್ಬಿಟ್ಟಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ