ನಟ,ನಿರ್ಮಾಪಕ ಕಮಲ್ ಆರ್ ಖಾನ್ ವಿರುದ್ಧ ಎಫ್‌ಐಆರ್ ದಾಖಲು..

ಶನಿವಾರ, 30 ಜುಲೈ 2016 (12:11 IST)
ನಟ,ನಿರ್ಮಾಪಕ ಕಮಲ್ ಆರ್ ಖಾನ್ ನಟಿಯೊಬ್ಬರಿಗೆ ಟ್ವಿಟರ್‌ನಲ್ಲಿ ಕಿರುಕುಳ ಹಾಗೂ ಟೀಕೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಕಮಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೂಲಗಳ ಪ್ರಕಾರ ಮುಂಬೈ ಮೂಲದ ವಕೀಲರೊಬ್ಬರು ರಿಜ್ವಾನ್ ಸಿದ್ದಿಕಿ ಎಂಬಾತರು ಕೆಆರ್‌ಕೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.


ವಕೀಲ ರಿಜ್ವಾನ್ ಸಿದ್ದಿಕಿ ಎಂಬಾತರು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಫಿಮೇಲ್ ನಟಿಯರಿಗೆ ಹಾಗೂ ಮಾಡೆಲ್‌ಗಳ ಟೀಕೆ ಮಾಡಿರುವುದರ ಕುರಿತು ಪೋಸ್ಟ್ ಮಾಡಲಾಗಿತ್ತು. 

ಟ್ವಿಟರ್ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ಕಮಲ್ ಆರ್ ಖಾನ್, ಈ ಹಿಂದೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಡುವಿನ ಪ್ರೇಮ ಪ್ರಸಂಗದ ಬಗ್ಗೆ ಟ್ವಿಟ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.

ಇದೀಗ ನಟಿ, ಮಾಡೆಲ್‌ಗಳ ಬಗ್ಗೆ ಟೀಕೆ ಮಾಡಿರುವ ಕಮಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ