ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಫಸ್ಟ್ ಲುಕ್

ಸೋಮವಾರ, 15 ಆಗಸ್ಟ್ 2016 (15:07 IST)
ಉಳಿದವರು ಕಂಡಂತೆ , ರಿಕ್ಕಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಜೋಡಿ ರಿಷಭ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಮತ್ತೆ ಜೊತೆಯಾಗಿ ಕೆಲಸ ಮಾಡುತ್ತಿರುವ ಸಿನಿಮಾ ಕಿರಿಕ್ ಪಾರ್ಟಿ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಬಳಿಕ ರಕ್ಷಿತ್ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಲರ್ ಕಲ್ ಆಗಿ ಮೂಡಿ ಬಂದಿರುವ ಈ ಪೋಸ್ಟರ್ ನಲ್ಲಿ ರಕ್ಷಿತ್ ಶೆಟ್ಟಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 
ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಯಂಗ್ ಬಾಯ್ ಆಗಿ, ಹಾಗೂ ಫನ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಿಂತಲೂ ಅವರ ಲುಕ್ ಈ ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾಗಿದೆ.

ಅಂದ್ಹಾಗೆ ರಿಷಭ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಈಗಾಗಲೇ ತನ್ನ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಕಳೆದ ಕೆಲ ದಿನಗಳಿಂದ ಸಿನಿಮಾ ತಂಡ ಹಾಸನದ ಕಾಲೇಜೊಂದರಲ್ಲಿ ಸಿನಿಮಾ ಚಿತ್ರೀಕರಣ ನಡೆಸಿತ್ತು.
 
ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರು ಮು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲನೇ ಶೇಡ್ ಪಕ್ಕಾ ಪೋರ್ಕಿ ಲುಕ್ ನಲ್ಲಿ ಮಿಂಚಲಿದ್ದಾರಂತೆ.
 
ಸಿನಿಮಾದಲ್ಲಿ ರಕ್ಷಿತ್ ಅವರಿಗೆ ಇಬ್ಬರು ನಾಯಕಿಯರು. ರಶ್ಮಿಕಾ ಹಾಗೂ ಸಂಯುಕ್ತಾ ಹೆಗಡೆಗೆ "ಕಿರಿಕ್‌ ಪಾರ್ಟಿ'ಯಲ್ಲಿ ರಕ್ಷಿತ್ ಅವರಿಗೆ ನಾಯಕಿಯರು. ಈ ಸಿನಿಮಾ ಎಂಜಿನಿಯರಿಂಗ ಕಾಲೇಜೊಂದರಲ್ಲಿ ನಡೆಯುವ ಸನ್ನಿವೇಶವನ್ನು ಒಳಗೊಂಡಿದೆಯಂತೆ. ಸಿನಿಮಾ ಅಕ್ಟೋಬರ್ ವೇಳೆಗೆ ತೆರೆಗೆ ಬರಲಿದೆಯಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ