ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Sampriya

ಗುರುವಾರ, 24 ಏಪ್ರಿಲ್ 2025 (18:56 IST)
Photo Credit X
ಬೆಂಗಳೂರು: ವಾರದ ಹಿಂದೆಯಷ್ಟೇ ಜಮ್ಮು ಕಾಶ್ಮೀರಕ್ಕೆ ಪ್ಯಾಮಿಲಿ ಸಮೇತ ಟ್ರಿಪ್‌ಗೆ ಹೋಗಿದ್ದ ಕನ್ನಡ ಗಾಯಕ ಗಣೇಶ್ ಕಾರಂತ್ ಅವರು ಪಹಲ್ಗಾಮ್‌ನ ಇಂದಿನ ಪರಿಸ್ಥಿತಿ ನೆನಪಿಸಿಕೊಂಡಾಗ  ನಡುಕ ಶುರುವಾಗುತ್ತದೆ ಎಂದಿದ್ದಾರೆ.

ಗಣೇಶ್ ಕಾರಂತ್, ಅವರ ಪತ್ನಿ ಹಾಗು ಅವರ ಪೋಷಕರು ವಾರದ ಹಿಂದೆಯಷ್ಟೇ ಜಮ್ಮು ಕಾಶ್ಮೀರಕ್ಕೆ ಟ್ರಿಪ್ ಹೋಗಿ, ಕೆಲ ದಿನಗಳ ಕಾಲ ಎಂಜಾಯ್ ಮಾಡಿದ್ದರು. ಅಲ್ಲಿನ ಅವರ ರೀಲ್ಸ್ ಹಾಗೂ ಪ್ರಕೃತಿ ಸೌಂದರ್ಯವನ್ನು ಅವರು ಬಣ್ಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.

ಈಟ್ರಿಪ್‌ಗೆ ಸಂಬಂಧಿಸಿದ ವಿಡಿಯೋವೊಂದನ್ನು ಈಚೆಗೆ ಅವರು ಹಂಚಿಕೊಂಡಿದ್ದರು. ಮಂಗಳವಾರ ಪಹಲ್ಗಾಮ್‌ನಲ್ಲಿ ಉಗ್ರರ ನಡೆಸಿದ ದಾಳಿ ಕೇಳಿ ಶಾಕ್ ಆಯಿತು. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಎಡಿಟ್ ಮಾಡುತ್ತಿದ್ದು, ವಿಚಾರ ತಿಳಿದು ಕೈ ನಡುಕ ಶುರುವಾಯಿತು ಎಂದು ಗಣೇಶ್ ಹೇಳಿದ್ದಾರೆ.

ಉಗ್ರರಿಂದ ದಾಳಿಗೊಳಗಾದ ಪ್ರದೇಶದಲ್ಲೇ ನಾವು ಕೂಡಾ ಕೆಲ ದಿನಗಳ ಹಿಂದೆ ಎಂಜಾಯ್ ಮಾಡಿದ್ದೆವು. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಅಲ್ಲಿಗೆ ತಲುಪಲು ಆಗುವ ವೆಚ್ಚ ಹಾಗೂ ಹೇಗೇ ಹೋಗಬೇಕೆಂಬುದರ ಬಗ್ಗೆ ಇನ್ನಷ್ಟೇ ವಿಡಿಯೋವನ್ನು ಹಂಚಿಕೊಳ್ಳಬೇಕಿತ್ತು.

ಈ ವಿಚಾರ ತಿಳಿದು ಶಾಕ್ ಆಯಿತು. ನಮ್ಮ ರೀಲ್ಸ್ ನೋಡಿ ನೂರಾರು ಮಂದಿಗೆ ಹೇಗೇ ಹೋಗಬೇಕೆಂದು ಪ್ರಶ್ನಿಸಿದ್ದರು. ಪುಣ್ಯಕ್ಕೆ ಈ ಸಂಬಂಧಿಸಿದ ವಿಚಾರವನ್ನು ಇನ್ನೂ ಹಂಚಿಕೊಳ್ಳಬೇಕಿತ್ತು. ನಾನು ಏನಾದರೂ ಹೇಳಿ, ಇಂದು ಆ ಪರಿಸ್ಥಿತಿಯನ್ನು ಅವರು ಇರುತ್ತಿದ್ದರೆ ನನಗೆ ಆ ಪಾಪ ಪ್ರಜ್ಞೆ ಯಾವಾತ್ತು ಹೋಗುತ್ತಿರಲಿಲ್ಲ ಎಂದರು.

 ಈ ಸುಂದರವಾದ ಪ್ರದೇಶ ಮತ್ತೇ ಅದೇ ಸ್ಥಿತಿಗೆ ವಾಪಾಸ್ಸಾಗಲು ಇನ್ನೂ ವರ್ಷ ಬೇಕಾಗುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ