ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದ ಫಿತೂರ್ ಸಿನಿಮಾ

ಶನಿವಾರ, 13 ಫೆಬ್ರವರಿ 2016 (12:28 IST)
ಕತ್ರೀನಾ ಕೈಫ್ ಹಾಗೂ ಆಶಿಕಿ 2 ಸಿನಿಮಾ ಖ್ಯಾತಿಯ ಆದಿತ್ಯಾ ರಾಯ್ ಕಪೂರ್ ಜೊತೆಯಾಗಿ ಅಭಿನಯಿಸಿರುವ ಸಿನಿಮಾ ಫಿತೂರ್.ಟ್ರೇಲರ್ ನಿಂದ ಲಕ್ಷಾಂತರ ಅಭಿಮಾನಿಗಳ ದಿಲ್ ಕದ್ದಿದ್ದ ಈ ಸಿನಿಮಾದ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು.ಆದ್ರೆ ಆ ನಿರೀಕ್ಷೆಯನ್ನು ಫಿತೂರ್ ಸಿನಿಮಾ ಹುಸಿಯಾಗಿಸಿದೆ.
 
ಫಿತೂರ್ ಸಿನಿಮಾ ಒಂದು ಸುಂದರವಾದ ಪ್ರೇಮಕಥೆಯಾಧಾರಿತ ಸಿನಿಮಾ. ಹಾಗಾಗಿ ಕತ್ರೀನಾ ಹಾಗೂ ಆದಿತ್ಯಾ ರಾಯ್ ಕಪೂರ್ ತೆರೆ ಮೇಲೆ ಅಭಿಮಾನಿಗಳಿಗೆ ಮೋಡಿ ಮಾಡುತ್ತೆ ಅಂತಾ ಎಲ್ಲರೂ ಅಂದುಕೊಂಡಿದ್ದರು.ಆದ್ರೆ ಮೊದಲ ದಿನ ಸಿನಿಮಾ ನೋಡಿದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಿನಿಮಾದ ಟ್ರೇಲರ್ ಮೂಡಿಸಿದ್ದ ನಿರೀಕ್ಷೆಗಳು ಸಿನಿಮಾ ನೋಡಿದ ಮೇಲೆ ಹುಸಿಯಾಗಿದೆ ಅಂತಾ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಇನ್ನು ಸಿನಿಮಾದಲ್ಲಿ ಆದಿತ್ಯಾ ರಾಯ್ ಕಪೂರ್ ಕಾಶ್ಮೀರಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.ಆದ್ರೆ ಆಶಿಕಿ-2 ಸಿನಿಮಾದ ಅಭಿನಯಕ್ಕೆ ಹೋಲಿಸಿದ್ರೆ ಫಿತೂರ್ ನಲ್ಲಿ ಆದಿತ್ಯ ಅಭಿನಯ ಸಪ್ಪೆ ಅನಿಸುತ್ತೆ.ಟಬು ಅಭಿನಯ ಕೂಡ ಅಷ್ಟಕಷ್ಟೇ.
 
 ಫಿತೂರ್ ಸಿನಿಮಾವನ್ನು ಅಭಿಷೇಕ್ ಕಪೂರ್ ಅವರು ನಿರ್ದೇಶನ ಮಾಡಿದ್ದಾರೆ.ಆದಿತ್ಯಾ ರಾಯ್ ಕಪೂರ್ ನಾಯಕನಾಗಿ ಕಾಣಿಸಿಕೊಂಡ್ರೆ, ಕತ್ರೀನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಟಬು ಕೂಡ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ