ಗೋಲ್ಡನ್ ಸ್ಟಾರ್ ನನ್ನ ಪತಿ ಅಂತಿದ್ದಾಳೆ ದಾವಣಗೆರೆ ಯುವತಿ

ಶುಕ್ರವಾರ, 5 ಆಗಸ್ಟ್ 2016 (09:17 IST)
ಸಿನಿಮಾ ತಾರೆಯರು ಅಂದ್ರೆ ಕೆಲವರಿಗೆ ಅದೇನೋ ಗೊತ್ತಿಲ್ಲ. ಅವರೇ ನಮ್ಮ ಪ್ರಪಂಚ ಅಂದುಕೊಂಡು ಬಿಡುತ್ತಾರೆ. ಅವರಿಗೋಸ್ಕರ ನಾನು ನಾವು ಏನ್ಬೇಕಾದ್ರು ಮಾಡೋಕೆ ರೆಡಿ ಅಂತಾರೆ. ಅದರಲ್ಲೂ ಸಿನಿಮಾ ಹೀರೋಗಳಿಗೆ ಮಹಿಳಾ ಅಭಿಮಾನಿಗಳು ತುಸು ಜಾಸ್ತಿನೇ. ದಾವಣಗೆರೆಯ ಯುವತಿಯೊಬ್ಬಳದ್ದು ಅದೇ ಕಥೆ.


ಗೋಲ್ಡನ್ ಸ್ಟಾರ್ ಗಣೇಶ್ ವೈವೈಹಿಕ ಜೀವನಕ್ಕೆ ಕಾಲಿಟ್ಟಾಗ ಇದರಿಂದ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು ನಿಮಗೆಲ್ಲಾ ನೆನಪಿರಬಹುದು. ಇದೀಗ ದಾವಣಗೆರೆಯ ಯುವತಿಯೊಬ್ಬಳು ಕೂಡ ಇದೇ ರೀತಿ ಗಣೇಶ್ ಅವರ ಅಂಧಾಭಿಮಾನಿಯಾಗಿದ್ದಾಳೆ.

ದಾವಣಗೆರೆಯ ಪುಷ್ಪ ಅನ್ನೋ ಯುವತಿ ಗೋಲ್ಡನ್ ಸ್ಟಾರ್ ಗಣೇಶ್ ಅವರೇ ನನ್ನ ಪತಿ. ನಾನು ಅವರನ್ನು ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿದ್ದೇನೆ ಅಂತಿದ್ದಾಳೆ. ಕೇವಲ ಆರನೇ ಕ್ಲಾಸ್ ಓದಿರುವ ಪುಷ್ಪಗೆ ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ತುಂಬಾನೇ ಪ್ರೀತಿಯಂತೆ . ಗಣೇಶ್ ಅವರ ಸಿನಿಮಾಗಳನ್ನು ಚಾಚು ತಪ್ಪದೇ ನೋಡುವ ಪುಷ್ಪ ಕಳೆದ ಕೆಲ ವರ್ಷಗಳಿಂದ ಗಣೇಶ್ ಅವರನ್ನೇ ವಿವಾಹವಾಗೋದು ಅಂತಾ ಹಠ ಹಿಡಿದು ಕುಳಿತಿದ್ದಾಳಂತೆ.

ಗಣೇಶ್ ಅವರನ್ನು ವಿವಾಹವಾಗೋದಕ್ಕೆ ಸಾಧ್ಯವಿಲ್ಲ ಅಂತಾ ಮನೆಯವರು ಹೇಳಿದ್ದಕ್ಕೆ ಮೂರು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಳಂತೆ ಪುಷ್ಪಲತಾ. ಇನ್ನು ಪುಷ್ಪಲತಾ ಸ್ವಲ್ಪ ಮಾನಸಿಕ ತೊಂದರೆಯಿಂಗ ಬಳಲುತ್ತಿದ್ದಾಳಂತೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ಗೋಲ್ಡನ್ ಸ್ಟಾರ್ ಪುಷ್ಪಳೊಂದಿಗೆ ಮಾತನಾಡಿದ್ದಾರೆ. ಸಿನಿಮಾನೇ ಜೀವನಾನೇ ಬೇರೆ ನೀವು ಚೆನ್ನಾಗಿ ಓದಿ ಬದುಕು ರೂಪಿಸಿಕೊಳ್ಳಿ ಅಂತಾ ಹೇಳಿದ್ದಾರೆ.ಅಲ್ಲದೇ ಆಕೆಯ ಹೆತ್ತವರಿಗೆ ಆಕೆಗೆ ಒಳ್ಳೆ ಕಡೆ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ