ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಸಿಲುಕಿಕೊಂಡ 'ಮನಸೆಲ್ಲಾ ನೀನೆ' ಚಿತ್ರದ ನಟಿ ಗಾಯತ್ರಿ ರಘುರಾಂ

ಬುಧವಾರ, 28 ನವೆಂಬರ್ 2018 (07:28 IST)
ಚೆನ್ನೈ : ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು ಎಂದು ತಿಳಿದರೂ ಕೂಡ ತಮಿಳು ನಟಿ ಗಾಯತ್ರಿ ರಘುರಾಂ ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದಾರೆ.


ಶನಿವಾರ ರಾತ್ರಿ ಚೆನ್ನೈನ ಎಂಆರ್ಸಿ ನಗರದಲ್ಲಿರುವ ಸ್ಟಾರ್ ಹೋಟೆಲ್ ನಲ್ಲಿ ಆಯೋಜಿಸಿದ ಪಾರ್ಟಿಯಲ್ಲಿ ಭಾಗವಹಿಸಿದ ನಟಿ ನಂತರ ಪಾರ್ಟಿ ಮುಗಿಸಿ ಬರುವಾಗ ಸಂಚಾರಿ ಪೊಲೀಸರು ನಟಿಯ ಕಾರು ತಡೆದು ತಪಾಸಣೆ ನಡೆಸಿದರು. ಆಗ ಗಾಯಿತ್ರಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ


ನಟಿ ತಪಾಸಣೆ ವೇಳೆ ನೂರಾರು ಅಭಿಮಾನಿಗಳು ಸ್ಥಳದಲ್ಲಿ ನಟಿಯ ಫೋಟೋ ಹಾಗೂ ವಿಡಿಯೋವನ್ನು ತೆಗೆದುಕೊಳ್ಳುತ್ತಿದ್ದರಿಂದ ಕೂಡಲೇ ಪೊಲೀಸರು ನಟಿಯನ್ನು ತಮ್ಮ ವಾಹನದಲ್ಲಿ ಮನೆಗೆ ತಲುಪಿಸಿ ಆಕೆ ಚಲಾಯಿಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೆ ಅಲ್ಲ ಸೆಕ್ಷನ್ 185 ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಇವರು ಕನ್ನಡದ 'ಮನಸೆಲ್ಲಾ ನೀನೆ' ಚಿತ್ರದಲ್ಲಿ ಅಭಿನಯಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ