ಮೀಟೂ ಆರೋಪ ಮಾಡಿದ್ದಕ್ಕೆ ಡಬ್ಬಿಂಗ್ ಯೂನಿಯನ್ ಸದಸ್ಯತ್ವ ಕಳೆದುಕೊಂಡ ಚಿನ್ಮಯಿ ಶ್ರೀಪಾದ

ಮಂಗಳವಾರ, 20 ನವೆಂಬರ್ 2018 (09:56 IST)
ಚೆನ್ನೈ : ಮೀಟೂ ಆರೋಪ ಮಾಡಿದ್ದ ಗಾಯಕಿ, ಕಂಠದಾನ ಕಲಾವಿದೆ ಚಿನ್ಮಯಿ ಶ್ರೀಪಾದ ಅವರನ್ನು ತಮಿಳುನಾಡು ಡಬ್ಬಿಂಗ್ ಯೂನಿಯನ್ ಸದಸ್ಯತ್ವದಿಂದ  ಹೊರಹಾಕಲಾಗಿದೆ.


ತಮಿಳು ಸಿನಿಮಾ ಡಬ್ಬಿಂಗ್ ಮಾಡುತ್ತಿದ್ದ ಚಿನ್ಮಯಿ ಶ್ರೀಪಾದ ಅವರು ಹಿರಿಯ ಗೀತರಚನೆಕಾರ ವೈರಮುತ್ತು ಹಾಗೂ ಡಬ್ಬಿಂಗ್ ಯೂನಿಯನ್ ಮುಖ್ಯಸ್ಥ ರಾಧಾರವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ನಂತರ ಟ್ವೀಟ್ ಮಾಡಿರುವ ಚಿನ್ಮಯಿ ನನ್ನ ಡಬ್ಬಿಂಗ್ ಕೆರಿಯರ್ ಹೊಗೆ ಹಾಕಿಸಿಕೊಳ್ಳಲಿದೆ ಏಕೆಂದರೇ ರಾಧಾರವಿ ಡಬ್ಬಿಂಗ್ ಯೂನಿಯನ್ ಮುಖ್ಯಸ್ಥರಾಗಿದ್ದಾರೆ ಎಂದು ಹೇಳಿದ್ದರು.


ಆದರೆ ಇದೀಗ ಚಿನ್ಮಯಿ ಶ್ರೀಪಾದ ಅವರನ್ನು ತಮಿಳುನಾಡು ಡಬ್ಬಿಂಗ್ ಯೂನಿಯನ್ ಸದಸ್ಯತ್ವದಿಂದ  ಹೊರಹಾಕಲಾಗಿದೆ. ಈ ವಿಚಾರವನ್ನು ಅಮೆರಿಕಾದಲ್ಲಿ ಸಂಗೀತ ಕಾರ್ಯಕ್ರಮ ಪ್ರವಾಸದಲ್ಲಿರುವ ಚಿನ್ಮಯಿ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ತಾವು ಡಬ್ಬಿಂಗ್ ಕಲಾವಿದರ ಸಂಘದ ಸದಸ್ಯೆಯಾಗಿದ್ದು, ನನ್ನೊಂದಿಗೆ ಚರ್ಚಿಸದೇ ನನ್ನ ಸದಸ್ಯತ್ವ ರದ್ಧುಪಡಿಸಲಾಗಿದೆ.ಕೇವಲ ಮೆಸೇಜ್ ಮಾತ್ರ ಕಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.


ತಮಿಳು ಸಿನಿಮಾ ಉದ್ಯಮದಲ್ಲಿ ಡಬ್ಬಿಂಗ್ ಮಾಡಬೇಕು ಎಂದರೆ, ಡಬ್ಬಿಂಗ್ ಯೂನಿಯನ್ ಸದಸ್ಯತ್ವ ಕಡ್ಡಾಯ. ಆದರೆ ಲೈಂಗಿಕ ದೌರ್ಜನ್ಯವನ್ನು ಹೇಳಿಕೊಂಡಿದ್ದರಿಂದ ಇದೀಗ ಅವರ ತಮಿಳುನಾಡು ಡಬ್ಬಿಂಗ್ ಯೂನಿಯನ್ ಸದಸ್ಯತ್ವ ರದ್ದುಗೊಳಿಸಲಾಗಿದ್ದು,ಇನ್ನೂ ಮುಂದೆ ಚಿನ್ಮಯಿ ಯಾವುದೇ ತಮಿಳು ಸಿನಿಮಾ ಡಬ್ಬಿಂಗ್ ಮಾಡುವಂತಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ